ಬಂಟ್ವಾಳ:ಇಲ್ಲಿನ ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮದೇವತೆ ಪುರಾಣ ಪ್ರಸಿದ್ಧ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ರಾತ್ರಿ ಆಕರ್ಷಕ ಮಹಾ ರಥೋತ್ಸವ ನಡೆಯಿತು.

8btl-Arala ಜ.28ರಂದು ಕಾಯರ್ದಡಿ ಕುಂಟ ಮುಹೂರ್ತ ಮೂಲಕ ಆರಂಭಗೊಂಡ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ದೇವರ ಬಲಿ ಉತ್ಸವ, ಭಜನೆ, ದೀಪದ ಬಲಿ ಉತ್ಸವ, ನಡುಬಲಿ ಉತ್ಸವ, ಚಂದ್ರ ಮಂಡಲೋತ್ಸವ, ಭರತನಾಟ್ಯ, ನೃತ್ಯ ವೈಭವ ಸಹಿತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದ.ತಂತ್ರಿ ನಡ್ವಂತಾಡಿ ಉದಯ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಶುಕ್ರವಾರ ರಾತ್ರಿ ನಡೆದ ಮಹಾರಥೋತ್ಸವದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ, ರಥ ಕೊಡುಗೆ ನೀಡಿದ ಬಡಾಜೆಗುತ್ತು ರವಿಶಂಕರ ಶೆಟ್ಟಿ ಮಾವಂತೂರು, ಅಗ್ಗೊಂಡೆ ಜಗದೀಶ ಆಳ್ವ, ಮುರಳೀಧರ ಶೆಟ್ಟಿ, ಪ್ರಧಾನ ಅರ್ಚಕ ಹುಣ್ಸೆಯಡಿ, ಹರೀಶ ಭಟ್, ದಿನೇಶ ಭಟ್ ಸಹಿತ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.

By Suddi9

Leave a Reply

Your email address will not be published. Required fields are marked *