ಬಂಟ್ವಾಳ; ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಹುತೇಕ ಧಾರ್ಮಿಕ ಕ್ಷೇತ್ರಗಳ ಸಂಪರ್ಕ ರಸ್ತೆಯನ್ನು  ಆದ್ಯತೆಯ ನೆಲೆಯಲ್ಲಿ  ಅಭಿವೃದ್ದಿ ಪಡಿಸಲಾಗಿದ್ದು,ಇದರಿಂದಾಗಿ  ದೇವಾಲಯಕ್ಕೆ ಬರುವ ಭಕ್ತರಿಗೆ  ಸಂಪರ್ಕಿಸಲು ಸುಲಭ ಆಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹೇಳಿದರು.
DSC_1141
ಅವರು ಶನಿವಾರ ಪಾಣೆಮಂಗಳೂರು ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ನೇತ್ರಾವತಿ ನದಿಗೆ  ೫೩ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆಯನ್ನು  ಉದ್ಘಾಟಿಸಿ ಮಾತನಾಡಿದರು. ನಂದಾವರದಿಂದ ಪಾಣೆಮಂಗಳೂರು ನೂತನ ಸಂಪರ್ಕ ರಸ್ತೆಯನ್ನು ಪ್ರವಾಸೋದ್ಯಮ  ಇಲಾಖೆಯ ಮೂಲಕ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲ್ಲಿಸಲಾಗಿದೆ. ಅಷ್ಟೊಂದು ಮೊತ್ತವು ಇಲಾಖೆಯಿಂದ ಮಂಜೂರಾತಿಗೆ ಸಾಧ್ಯವಾಗದೇ ಹೋದರೂ ಇತರೆ ಇಲಾಖೆಯಿಂದ ಅದಕ್ಕೆ ಹೆಚ್ಚಿನ ಮೊತ್ತವನ್ನು  ಕಾದಿರಿಸಿ  ಭಕ್ತ ಜನರಿಗೆ ಕ್ಷೇತ್ರಕ್ಕೆ ಸಂಪರ್ಕಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸುವುದಾಗಿ   ತಿಳಿಸಿದರು.ಶಾಸಕನಾದ ಬಳಿಕ ತಕ್ಷಣದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ದಿ ಪಡಿಸಲಾಗಿದ್ದು,
DSC_1146ನಂತರ ಶ್ರೀಕ್ಷೇತ್ರ ನಂದಾವರಕ್ಕೆ ಸಂಪರ್ಕಿಸುವ ರಸ್ತೆಯನ್ನು ಪೂರ್ಣ ಅಭಿವೃದ್ದಿ ಪಡಿಸಿದ್ದಾಗಿ ತಿಳಿಸಿದರು.ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಸ್ತಾವನೆ ಮಾತುಗಳನ್ನಾಡಿ, ಶಾಸಕರು ಕ್ಷೇತ್ರದ ಬಗ್ಗೆ ಇಟ್ಟಿರುವ ಅಭಿಮಾನಕ್ಕೆ ಧನ್ಯರಾಗಿದ್ದು, ಅಭಿವೃದ್ದಿ ಕೆಲಸಗಳ ಬಗ್ಗೆ ಅವರಲ್ಲಿ ಮಾಡಿರುವ ಮನವಿಗೆ ಸ್ಪಂದಿಸಿರುವ ಶಾಸಕರು ನೇತ್ರಾವತಿ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸಿ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದು ಅಭಿನಂದಿಸಿದರು.ಈ ಸಂದರ್ಭ ಕ್ಷೇತ್ರದ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಅವರನ್ನು ಅಭಿನಂದಿಸಲಾಯಿತು..ಜಿ.ಪಂ. ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ವೇ. ಮೂ. ಮಹೇಶ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ. ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಕ್ ನಗ್ರಿ,  ಕೆ.ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಎಸ್. ಗಂಗಾಧರ ಭಟ್ ಕೊಳಕೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *