ಬಂಟ್ವಾಳ: ಯೋಗಾಭ್ಯಾಸದ ಮೂಲಕ ಭಾವನಾತ್ಮಕ , ಮಾನಸಿಕ ಹಾಗೂ ಭೌತಿಕ ನೆಲೆಗಳ ನಡುವಿನ ಪರಸ್ಪರ ಸಂಬಂಧದ ಅರಿವು ಉಂಟಾಗುತ್ತದೆ ಎಂದು ಬೆಂಗಳೂರಿನ ಆತ್ಮದರ್ಶನ ಯೋಗಾಶ್ರಮದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಲಾವಣ್ಯ ಅವರು ಹೇಳಿದರು.
IMG-20200204-WA0040ಜೋಡುಮಾರ್ಗದ ಮೊಡಂಕಾಪು ಸರಿದಂತರ ಪ್ರಕಾಶನದ ಆಶ್ರಯದಲ್ಲಿ ಬಿಹಾರ ಯೋಗ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಅವಧಿಯ ಯೋಗಶಿಬಿರದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಕಾಶನದ ಶ್ರೀ ರಾಜಮಣಿ ರಾಮಕುಂಜ ಮುಖ್ಯ ಅಥಿತಿಯಾಗಿ ಮಾತನಾಡುತ್ತಾ ಯೋಗ ಅನ್ನುವುದು ಕೇವಲ ಭೌತಿಕ ಅಭ್ಯಾಸವಷ್ಟೇ ಅಲ್ಲದೆ ಜೀವನ ಶೈಲಿಯಾಗಿ ರೂಢಿಸಿಕೊಳ್ಳಬೇಕಾಗಿದೆ ಎಂದರು. ಯೋಗಾಶ್ರಮದ ಸದಸ್ಯರಾದ ಶ್ರೀ ಗೋವಿಂದ ಭಟ್ ಶಿಬಿರವನ್ನು ನಡೆಸಿಕೊಟ್ಟರು. ಶಿಬಿರದ ಸಂಯೋಕಿ ಶ್ರೀಮತಿ ಆಶಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *