ಬಂಟ್ವಾಳ:  ಗ್ರಾಮೀಣ ಜನತೆಯ ಮೂಲಭೂತ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಗ್ರಾಮ ಪಂಚಾಯತ್‌ಗಳು ಜನತೆಯ ಕಷ್ಟ-ಸುಖಗಳಿಗೂ ಸ್ಪಂದನೆ ನೀಡುತ್ತಿರುವುದು ಶ್ಲಾಘನೀಯಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.ಅವರು ಮಂಗಳವಾರ ಸಜೀಪಮುನ್ನೂರು ಗ್ರಾ.ಪಂ.ವಠಾರದಲ್ಲಿ ಗ್ರಾ.ಪಂ.ನ ನೂತನ ಎನ್‌ಆರ್‌ಎಲ್‌ಎಂ ಕಟ್ಟಡ, ಗೋದಾಮು ಹಾಗೂ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿದರು.
0402ks7 phಗ್ರಾಮದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಚೆನ್ನಾಗಿ ಕೆಲಸ ಮಾಡಿರುವ ಸಜೀಪಮುನ್ನೂರು ಗ್ರಾ.ಪಂ. ತನ್ನ ಕಚೇರಿಯ ಮುಂಭಾಗದಲ್ಲಿರುವ ಅಂಗನವಾಡಿ ಕೇಂದ್ರದ ವಠಾರದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕೆ ಶಾಸಕನಾಗಿ ತಾನು ಕೂಡ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಮಾಜಿ ಸಚಿವ ಬಿ.ರಮಾನಾಥ ರೈ ಅವರು ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿ, ಸರಕಾರದ ಅನುದಾನಗಳು ನೇರವಾಗಿ ಗ್ರಾ.ಪಂ.ಗಳಿಗೆ ತಲುಪುವ ಕಾರ್ಯದಿಂದ ಗ್ರಾ.ಪಂ.ಗಳು ಕೂಡ ಸ್ವಾಭಿಮಾನದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು,
0402ks6 ph (1)ಪಂಚಾಯತ್‌ರಾಜ್ ತಿದ್ದುಪಡಿಯಿಂದ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿದಂತಾಗಿದೆ ಎಂದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ,ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇದ್ದರೆ  ಗ್ರಾ.ಪಂ.ಹೇಗೆ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಈ ಗ್ರಾ.ಪಂ.ಸಾಕ್ಷಿಯಾಗಿದೆ ಎಂದರು.ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗ್ರಾ.ಪಂ.ನ ಅಭಿವೃದ್ಧಿಗೆ ಶ್ರಮಿಸಿದ ಆಡಳಿತ ಮಂಡಳಿ, ಅಧಿಕಾರಿ ವರ್ಗ, ಸಿಬಂದಿಯನ್ನು ಗೌರವಿಸಲಾಯಿತು.
IMG-20200204-WA0027 (1) ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯೆ ನಸೀಮಾ ಬೇಗಂ, ಗ್ರಾ.ಪಂ.ಅಧ್ಯಕ್ಷ ಶರೀಫ್ ನಂದಾವರ, ಉಪಾಧ್ಯಕ್ಷೆ ನಳಿನಿ ಮೊದಲಾದವರು ಉಪಸ್ಥಿತರಿದ್ದರು.ಅಭಿವೃದ್ಧಿ ಅಧಿಕಾರಿ ಡಾ| ಪ್ರಕಾಶ್ ಎಸ್.ಸ್ವಾಗತಿಸಿದರು. ಕಾರ್ಯದರ್ಶಿ ಶಿವಗೊಂಡಪ್ಪ ಬಿರಾದಾರ್ ವಂದಿಸಿದರು.
IMG-20200204-WA0031

By Suddi9

Leave a Reply

Your email address will not be published. Required fields are marked *