ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ವರ್ಷಾವಧಿ ಸಾಣದಜಾತ್ರೆಯು ಫೆಬ್ರವರಿ2ರವಿವಾರದಿಂದ8 ಶನಿವಾರದವರೆಗೆ ನಡೆಯಲಿದೆಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿಅವರು ತಿಳಿಸಿದ್ದಾರೆ.ಫೆಬ್ರವರಿ2ರ ರವಿವಾರದಂದುಮುಂಜಾನೆತೋರಣ ಮುಹೂರ್ತ ಹಾಗೂ ಸಂಜೆಪ್ರಥಮಚೆಂಡು, ದಿನಾಂಕ6ರಗುರುವಾರದಂದು ಕೊನೆ ಚೆಂಡು, ರಾತ್ರಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ಆಗಮಿಸಿ, ದ್ವಜಾರೋಹಣ ಹಾಗೂ ಕಂಚಿಲು ಸೇವೆ ನಡೆಯಲಿದೆ.
ಫೆಬ್ರವರಿ 7 ಶುಕ್ರವಾರದಂದು ಮುಂಜಾನೆ ಮಡಸ್ತಾನ ಸೇವೆ, ನವಕ ಕಲಶಾಭಿಷೇಕ,ಚಂಡಿಕಾಯಾಗ,ಅನ್ನ ಸಂತರ್ಪಣೆ, ಸಂಜೆ ಸಾಮೂಹಿಕ ದುರ್ಗಾನಮಸ್ಕಾರ ಪೂಜೆರಾತ್ರಿ ಶ್ರೀ ಉಳ್ಳಾಕ್ಲು ಧರ್ಮದೇವತೆಗಳ ನೇಮ ಹಾಗೂ ಬಂಡಿಉತ್ಸವ ನಡೆಯಲಿದೆ. ಫೆಬ್ರವರಿ 8ರ ಶನಿವಾರದಂದು ಪೂರ್ವಾಹ್ನ ಬಸದಿಯಲ್ಲಿಶ್ರೀ ಪದ್ಮಾವತೀದೇವಿ ಪ್ರತಿಷ್ಠೆ, ಮಧ್ಯಾಹ್ನ ಸಾಣದಲ್ಲಿ ಪಂಚಾಮೃತಅಭಿಷೇಕ, ನಂದಿ ಪೂಜೆ,ಅನ್ನ ಸಂತರ್ಪಣೆ, ಸಂಜೆಅರ್ಕುಳ ಬಸದಿಯಲ್ಲಿ ಮಹಾಮಾತೆ ಪದ್ಮಾವತೀದೇವಿಗೆ ಲಕ್ಷಪುಷ್ಪಾರ್ಚನೆ ಪೂಜೆ, ರಾತ್ರಿ ಶ್ರೀ ಮಗೃಂತಾಯಿಧರ್ಮದೈವದ ನೇಮ, ಬಂಡಿ ಉತ್ಸವಗಳು ಸಂಪನ್ನಗೊಳ್ಳಲಿದೆ.
