ಬಂಟ್ವಾಳ:ಹಾಡಹಗಲೇ ಬಿ.ಸಿ.ರೋಡಿನ ಕೈಕುಂಜೆ ಎಂಬಲ್ಲಿ ಕಳವು ಪ್ರಕರಣ ನಡೆದಿದೆ. ಬಿ.ಸಿ.ರೋಡ್ ಕೈಕುಂಜ ಪಶ್ಚಿಮ ಬಡಾವಣೆಯಲ್ಲಿ ಶ್ರೀಹರಿ ಯಳಚಿತ್ತಾಯ ಅವರ ಪತ್ನಿ ನಿವೃತ್ತ ಶಿಕ್ಷಕಿ ಶಾರದಾ ಅವರು ಈ ಕುರಿತು ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಜನವರಿ 30ರಂದು ಬೆಳಗ್ಗೆ ಸುಮಾರು 11.20ಕ್ಕೆ ಮನೆಗೆ ಬೀಗ ಹಾಕಿ ಸಮೀಪದ ಪೊಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಅವರು ತೆರಳಿದ್ದ ವೇಳೆ ಘಟನೆ ನಡೆದಿದೆ. ಮಧ್ಯಾಹ್ನ 2.45ರ ವೇಳೆ ಮನೆಗೆ ಮರಳಿದಾಗ ಬಾಗಿಲು ಮುರಿದ ಸ್ಥಿತಿಯಲಿದ್ದು, ಕಳವು ಪ್ರಕರಣ ಗೊತ್ತಾಗಿದೆ.

ಕೋಣೆಯಲ್ಲಿದ್ದಕಪಾಟಿನ ಒಳಗೆ ಪ್ಲಾಸ್ಟಿಕ್ ಕವರಿನಲ್ಲಿದ್ದ ಬೆಳ್ಳಿಯ ಸಾಮಾಗ್ರಿಗಳಾದ ತಂಬಿಗೆ, ದೀಪಗಳು, ಬಟ್ಟಲುಗಳು, ಜಪ ಮಾಡುವ ಸಾಮಾಗ್ರಿಗಳು, ಆರತಿ ತಟ್ಟೆಗಳು ಹಾಗೂ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನಲ್ಲಿಟ್ಟಿದ್ದ ನಗದನ್ನು ಕಳ್ಳರು ದೋಚಿದ್ದಾರೆ .ಕಳವಾದ  ಬೆಳ್ಳಿಯ ಸಾಮಗ್ರಿಗಳು ಮತ್ತು ನಗದಿನ ಒಟ್ಟು ಮೌಲ್ಯ ಸುಮಾರು ೨೪,೫೦೦ ರೂ.ಗಳೆಂದು ಅಂದಾಜಿಸಲಾಗಿದ್ದು, ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *