ಮಂಗಳೂರು: ಸನ್ಮಾನ್ಯ ಪ್ರಧಾನ ಮಂತ್ರಿಯವರ ‘ಸ್ವಚ್ಛ ಭಾರತ’ ಕಾರ್ಯಕ್ರಮದ ಅಂಗವಾಗಿ, ಗಾಂಧಿ ಜಯಂತಿಯಂದು ಬಿಜೆಪಿಯ ಕೊಡಿಯಾಲ್ಬೈಲ್ ವಾರ್ಡ್ ವತಿಯಿಂದ, ಬಿಜೈ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ಶ್ರೀ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕ ಶ್ರೀ ಎನ್. ಯೋಗೀಶ್ ಭಟ್, ಮಾಜಿ ಕಾರ್ಪೋರೇಟರ್ ಕೆ.ಪಿ. ಟೈಲರ್, ಬಿಜೆಪಿ ನಗರ ದಕ್ಷಿಣ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ವೆಂಕಟೇಶ್, ವಾರ್ಡ್ ಅಧ್ಯಕ್ಷ ಮೋಹಿತ್ ಹಾಗೂ ಇತರರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಸಂಪನ್ನಗೊಂಡಿತು.

