ಬಂಟ್ವಾಳ: ಪಕ್ಷಪಾತ ಕಾಯಿಲೆಯಿಂದ ಚೇತರಿಸಿಕೊಳ್ಳದೆ ಕಂಗಾಲಾಗಿರುವ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕನಿವಾಸಿ ವೇದಾವತಿಯವರಿಗೆ ಜೆ.ಡಿ ಬಾಯ್ಸ್ ಬಂಟ್ವಾಳ ತಂಡ ಸಹಾಯಧನ ವಿತರಿಸಿ ಮಾನವೀಯತೆ ಮೆರೆದಿದೆ.
ಬಲಗೈ ಮತ್ತು ಬಲಗಾಲಿನ ಸ್ವಾದೀನ ಕಳೆದುಕೊಂಡು ಮಾತು ನಿಂತು ಹೋಗಿರುವ ಕಡು ಬಡತನದಿಂದ ಕೂಡಿದ ಈ ಕುಟುಂಬ ಚಿಕಿತ್ಸೆಗಾಗಿ ಅಸಹಾಯಕ ಸ್ಥಿತಿಯಲ್ಲಿದ್ದು ವೈದ್ಯಕೀಯ ನೆರವಿಗಾಗಿ ಈ ಸಂಸ್ಥೆಯು 10 ಸಾ.ರೂ.ಸಹಾಯಧನವನ್ನು ನೀಡಿದೆ..

