ಬಂಟ್ವಾಳ,: ಕಟ್ಟಡವೊಂದಕ್ಕೆ  ಪೈಟಿಂಗ್ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಕಾರ್ಮಿಕರಿಬ್ಬರು ಆಯ ತಪ್ಪಿ ಬಿದ್ದ ಪರಿಣಾಮ  ಓರ್ವ ಕಾರ್ಮಿಕ ಮೃತಪಟ್ಟರೆ,ಇನ್ನೋರ್ವ ಗಂಭೀರಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಬುಧವಾರಸಂಜೆ  ಬಂಟ್ವಾಳ ಸಮೀಪದ ಭಂಡಾರಿಬೆಟ್ಟಿವಿನಲ್ಲಿ ನಡೆದಿದೆ.ಕಾಮಾಜೆ ನಿವಾಸಿ ನಾರಾಯಣ ಅವರ ಪುತ್ರ ಸುರೇಶ್(೨೬) ಮೃತ ರ್ದುಧೈವಿ. ಮತ್ತೋರ್ವ ಕಾರ್ಮಿಕ ಬಂಟ್ವಾಳ ನಿವಾಸಿ ಕೇಶವ ಎಂಬವರು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಭಂಡಾರಿಬೆಟ್ಟಿನ ಫ್ಲ್ಯಾಟೊಂದರ ಪೈಟಿಂಗ್ ಕಾರ್ಯಕ್ಕಾಗಿ ಪೈಂಟ್ ಮಾಡಲು ನಿಲ್ಲುವುದಕ್ಕೆ ಅಳವಡಿಸಿದ್ದ ಕಂಬಗಳನ್ನು ತೆರವುಗೊಳಿಸುವ ವೇಳೆ ಇಬ್ಬರು ಕಾರ್ಮಿಕ ಆಯತಪ್ಪಿ ಬಿದ್ದಿದ್ದಾರೆ.ತಕ್ಷಣ ಸ್ಥಳೀಯರು   ಗಾಯಾಳುಗಳನ್ನು  ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದ್ದು, ತಲೆ ಗಂಭೀರ ಗಾಯವಾಗಿದ್ದ ಸುರೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *