ಬಂಟ್ವಾಳ:  ತಾಲೂಕಿನ ವಾಮದಪದವು ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಯುವ ಛಾಯಾಗ್ರಾಹಕ ಕಮಲ್ ಶೆಟ್ಟಿ ಬೊಳ್ಳಾಜೆ ಹಾಗೂ ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಪಿಲಿಂಗಾಲ್ ಅವರು ಆಯ್ಕೆಯಾಗಿದ್ದಾರೆ.
2901pkt2(Kamal Shetty)

ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ  ಈ ಆಯ್ಕೆ ನಡೆಯಿತು.ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಉಪವಿಭಾಗದ ಅಧೀಕ್ಷಕ ಬಿ.ನಾಗೇಂದ್ರ ಅವರು ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಿದರು.

2901pkt2A(Sanjeeva poojary)
ನಿರ್ದೇಶಕರಾದ ಯಶೋಧರ.ಬಿ.ಶೆಟ್ಟಿ , ಗೋಪಾಲಕೃಷ್ಣ ಚೌಟ, ಸುಧೀರ್ ಕುಮಾರ್, ವೆಂಕಟೇಶ ಭಟ್,ನಾಗರಾಜ ಶೆಟ್ಟಿ, ಧರ್ಣಪ್ಪ ನಾಯ್ಕ, ಕೊರಗು, ಆಶಾ ಜಯರಾಮ ಶೆಟ್ಟಿ , ಗೋಪಾಲಕೃಷ್ಣ ಶೆಟ್ಟಿ , ವಿವೇಕಾನಂದ ಪೂಜಾರಿ, ರೋಹಿಣಿ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಸಿ.ಡಿಸೋಜ ಮತ್ತು ಸಿಬಂದಿ ವರ್ಗ ಸಹಕರಿಸಿದರು.

13 ಸ್ಥಾನಗಳಲ್ಲಿ 10 ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು: ಯಶೋಧರ ಬಿ.ಶೆಟ್ಟಿ , ಗೋಪಾಲಕೃಷ್ಣ ಚೌಟ, ಕಮಲ್ ಶೆಟ್ಟಿ, ಸುಧೀರ್ ಕುಮಾರ್, ವೆಂಕಟೇಶ ಭಟ್,ನಾಗರಾಜ ಶೆಟ್ಟಿ ,  ಸಂಜೀವ ಪೂಜಾರಿ,  ಧರ್ಣಪ್ಪ ನಾಯ್ಕ,  ಕೊರಗು, ಆಶಾ ಜಯರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು:  ಗೋಪಾಲಕೃಷ್ಣ ಶೆಟ್ಟಿ,  ವಿವೇಕಾನಂದ ಪೂಜಾರಿ, ರೋಹಿಣಿ ಅವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ವೇಳೆ ನಿರ್ದೇಶಕರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *