ಬಂಟ್ವಾಳ: ಸರಪಾಡಿ ಜಿಪಂ ಕ್ಷೇತ್ರಕ್ಕೊಳಪಟ್ಟಂತೆ ಕಾಂಗ್ರೆಸ್ ಪಕ್ಷದ ಪಂಚಾಯತ್ ಸದಸ್ಯರು ಮತ್ತು ಪರಾಜಿತ ಅಭ್ಯರ್ಥಿಗಳ ಸಮ್ಮೇಳನ ವಗ್ಗದಲ್ಲಿ ಮಂಗಳವಾರ ನಡೆಯಿತು. ಮಾಜಿ ಸಚಿವ ರಮಾನಾಥ ರೈ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ,ಮುಂಬರುವ ಗ್ರಾಪಂ ಸಹಿತ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಈಗಲೇ ಪೂರ್ವ ಸಿದ್ದತೆ ಮಾಡಿಕೊಂಡು ಒಗ್ಗಟ್ಟಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು,ಬಿಜೆಪಿ ಸರಕಾರದ ವೈಫಲ್ಯವನ್ನು ಜನರಿಗೆ ತಿಳಿ ಹೇಳುವ ಮೂಲಕ ಬೂತ್ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕರೆ ನೀಡಿದರು.

FB_IMG_1580219428398                        ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ  ಮುಖಂಡರು ಮತ್ತು ಕಾರ್ಯಕರ್ತರು ಸಕ್ರೀಯವಾಗಿ ಭಾಗವಹಿಸುವ ಮೂಲಕ ಎಲ್ಲ ಪಂಚಾಯತ್ ಗಳು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬರುವಂತೆ ಶ್ರಮಿಸಬೇಕು ಎಂದರು. ಜಿಪಂ ಸದಸ್ಯ ಪದ್ಮಶೇಖರ ಜೈನ್,ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಸದಸ್ಯೆಯರಾದ ಧನಲಕ್ಷ್ಮೀ ಬಂಗೇರ,ಬೇಬಿ ಕೃಷ್ಣಪ್ಪ, ನಾವೂರು ಗ್ರಾಪಂ.ಅಧ್ಯಕ್ಷೆ ಗುಲಾಬಿ ಚಂದಪ್ಪ ನಾಯ್ಕ್,ಮಣಿನಾಲ್ಕೂರು ಗ್ರಾಪಂ ಅಧ್ಯಕ್ಷೆ ಗೀತಾ ,ಕಾವಳಮೂಡೂರು ಗ್ರಾಪಂ.ಅಧ್ಯಕ್ಷ ಸಂತೋಷ್ ಪೂಂಜ,ಮುಖಂಡರಾದ ಜಿನರಾಜ ಆರಿಗ,ಮಾಯಿಲಪ್ಪ ಸಾಲಿಯಾನ್,ಸಂಪತ್ ಕುಮಾರ್ ಶೆಟ್ಟಿ,ಡೀಕಯ್ಯ ಬಂಗೇರ, ಡಾ.ಶೇರಾ,ಮಾಣಿಕ್ಯರಾಜ್ ಜೈನ್,ಬೆನಡಿಕ್ಟ್ ಡಿಸೋಜ,ಬಿ.ಆರ್.ಅಂಚನ್,ವಿಶ್ವನಾಥ ಬಿತ್ತ,ಅಬ್ದುಲ್ ಲತೀಫ್ ಮೊದಲಾದವರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಕರ್ಣ ವಂದಿಸಿದರು.

By Suddi9

Leave a Reply

Your email address will not be published. Required fields are marked *