ಬಂಟ್ವಾಳ : ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿಯ ಕಡೆಗೆ ಹೋಗಬೇಕಾದರೆ ಜ್ಞಾನರ್ಜನೆಯಾಗಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆ ಮಾಡಬೇಕುಎಂದು ಮಂಗಳೂರು ಶ್ರೀರಾಮಕೃಷ್ಣಾಶ್ರಮದ ಬಾಲಕಾಶ್ರಮದ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆದ ಸರಸ್ವತಿ ಪೂಜೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಅವರು ಶ್ರೀರಾಮ ಒಬ್ಬ ಆದರ್ಶ ಪುರುಷ, ಅವನ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸ್ವಾಮಿ ವಿವೇಕಾನಂದರ ಏಕಾಗ್ರತೆಯ ಮಹತ್ವನ್ನು ತಿಳಿಸಿದ ಅವರು ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಶಿಸ್ತನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ತಟ್ಟೆಯಲ್ಲಿ ಸರಸ್ವತಿ ಭಾವಚಿತ್ರ ಹಾಗೂ ಹೂವಿನೊಂದಿಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳು ಮಂದಿರದ ಮುಂಭಾಗದಲ್ಲಿ ಸಾಲಾಗಿ ಪೂಜೆಗೆ ಉಪಸ್ಥಿತರಾದರು. ಕಶೆಕೋಡಿ ಸೂರ್‍ಯಭಟ್ ಮತ್ತವರ ಬಳಗದವರು ಸರಸ್ವತಿ ಮಂತ್ರವನ್ನು ಪಠಿಸಿ ಪೂಜಾ ಕಾರ್‍ಯವನ್ನು ನಡೆಸಿಕೊಟ್ಟರು. ಶಿಶು ಮಂದಿರದಿಂದ ಪದವಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ಪೂಜೆಗೆ ಕುಳಿತು ಪೂಜಾ ವಿಧಾನಗಳನ್ನು ಮಾಡಿದರು.
ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ , ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್‌ಎನ್., ಎಲ್ಲಾ ವಿಭಾಗದ ಮುಖ್ಯಸ್ಥರು, ಶಿಕ್ಷಕರು ಶಿಕ್ಷಕೇತರರು, ಪೋಷಕರು ಉಪಸ್ಥಿತರಿದ್ದರು.




