ಕಿನ್ನಿಗೋಳಿ:ಕೆ. ಸೋಮಪ್ಪ ಸುವರ್ಣ ನೆರಳು-ನೆಂಪು ಸಮಿತಿ, ಮೂಲ್ಕಿ ಆಶ್ರಯದಲ್ಲಿ ಮಾಜಿ ಶಾಸಕ, ಪ್ರಗತಿಪರ ಕೃಷಿಕ, ಶಿಕ್ಷಣ ತಜ್ಞ, ಸಾಮಾಜಿಕ ನೇತಾರ ಮೂಲ್ಕಿ ಕೆ. ಸೋಮಪ್ಪ ಸುವರ್ಣರ ಎಂಟನೇ ವರ್ಷದ ಸಂಸ್ಮರಣೆ ಹಾಗೂ 2020 ರ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭ ಜನವರಿ 28 ಮಂಗಳವಾರ ಸಂಜೆ ಕಿನ್ನಿಗೋಳಿ ಹೊಟೇಲ್ ಸ್ವಾಗತ್ ನ ಮಾಸ್ಟರ್ ಹಾಲ್‍ನಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ ತಾಳಿಪಾಡಿಯ ಅಧ್ಯಕ್ಷ ಕುಶಲ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೂಲ್ಕಿಯ ಖ್ಯಾತ ವೈದ್ಯ ಡಾ. ಅಚ್ಚುತ ಕುಡ್ವ ಅವರು ಸೋಮಪ್ಪ ಸುವರ್ಣರ ಸಂಸ್ಮರಣೆ ಮಾಡಲಿದ್ದಾರೆ. ಈ ಸಂದರ್ಭ ಶಿಕ್ಷಣ ಕ್ಷೇತ್ರದ ಸಾಧಕ ಬಪ್ಪನಾಡು ಪಾಂಡುರಂಗ ಶೆಟ್ಟಿ, ಕೃಷಿ ಕ್ಷೇತ್ರದ ಸಾಧಕ ರಾಮ ಸುವರ್ಣ ನಿಡ್ಡೋಡಿ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆಗೈದ ಎ. ವೆಂಕಟರಮಣ ಅವರಿಗೆ 2020ನೇ ಸಾಲಿನ ಕೆ ಸೋಮಪ್ಪ ಸುವರ್ಣ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ತಾಳಿಪಾಡಿಯ ಶ್ರೀ ನಾರಾಯಣ ಗುರು ನರ್ಸರಿ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಲಿದೆಯೆಂದು ಕೆ. ಸೋಮಪ್ಪ ಸುವರ್ಣರ ನೆರಳು-ನೆಂಪು ಸಮಿತಿಯ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *