ಹಳೆಯಂಗಡಿ: ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಮತ್ತು ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು, ವಿಶ್ವ ವಿದ್ಯಾನಿಲಯ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಜಿಲ್ಲಾ ಯುವಜನ ಒಕ್ಕೂಟ ದ.ಕ ಜಿಲ್ಲೆ ಇದರ ಆಶ್ರಯದಲ್ಲಿ ಪುರಭವನ ಮಂಗಳೂರು ಇಲ್ಲಿ ನಡೆದ ಸ್ವಾಮಿ ವಿವೇಕಾನಂದರ 157 ನೇ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಯುವ ಮಂಡಲ ಪ್ರಶಸ್ತಿ ಪ್ರದಾನ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿಗೆ ಸ್ವಚ್ಚ ಭಾರತ್ ಇಂಟರ್ನಿಷಿಪ್ 2.0 ಜಿಲ್ಲಾ ಪ್ರಶಸ್ತಿ ಗೌರವ ಪುರಸ್ಕಾರ ನೀಡಲಾಯಿತು.

23KinniVivekananda
ಪುರಸ್ಕಾರವನ್ನು ಯುವಕ ಮಂಡಲದ ಪರವಾಗಿ ಅಧ್ಯಕ್ಷ ಸುಧಾಕರ ಆರ್ ಅಮೀನ್, ಪ್ರದಾನ ಕಾರ್ಯದರ್ಶಿ ಯತೀಶ್ ಕೋಟ್ಯಾನ್, ಸಲಹಾ ಸಮಿತಿಯ ಮೋಹನ್ ಬಂಗೇರ ಪಡೆದುಕೊಂಡರು.
ಈ ಸಂದರ್ಭ ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ವಾಗ್ಮಿ ಆದರ್ಶ್ ಗೋಖಲೆ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಕೆ., ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ವಕೀಲ ದಿನಕರ ಶೆಟ್ಟಿ, ಯುವ ಕೇಂದ್ರ ಮಂಗಳೂರು ಸಮನ್ವಯ ಅಧಿಕಾರಿ ರಘವೀರ್ ಎಸ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *