ಕೈಕಂಬ: ಸೀತಾರಾಮ ಭಜನಾ ಮಂದಿರ(ರಿ)ನಾರಳಇದರ 61 ನೇ ವರ್ಷದ ಭಜನಾ ಮಂಗಳೋತ್ಸವ ಹಾಗು ಆ ಪ್ರಯುಕ್ತ, ಫೆ.19 ರಿಂದ 22 ರವರೆಗೆ ಮೂರು ದಿನಗಳ ಕಾಲ ನಡೆಯುವ ಅಖಂಡ ಭಜನಾ ಮಂಗಳೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು,
ಭಜನಾ ಮಂದಿರದ ಅಧ್ಯಕ್ಷರಾದ ವಿನೋದ್ ಕುಮಾರ್ ಶೆಟ್ಟಿ, ಮಂದಿರ ಜೀರ್ಣೋಧಾರ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ, ಗೌರವಾಧ್ಯಕ್ಷರಾದ ಭಾಸ್ಕರ್ ಭಟ್ ಗಂಜಿಮಠ, ಪುರೋಹಿತರಾದ ಶ್ರೀಪತಿ ಆಚಾರ್ಯ ನಾರ್ಲ, ರಾಮ್ ಭಟ್ ನಾರ್ಲ ದೋಟ, ರಮೇಶ್ ಆಚಾರ್ಯ ನಾರ್ಲ, ಹಿರಿಯರಾದ ಕರುಣಾಕರ ಶೆಟ್ಟಿ, ಸದಾಶಿವ ಶೇಣವ ನಾರ್ಲ ಗುತ್ತು, ಸೂರ್ಯ ಭಟ್ ದೋಟ, ಕಾರ್ಯದರ್ಶಿ ಶಿವರಾಜ್ ನಾರ್ಲ, ಬಾಲಕೃಷ್ಣ ಶೆಟ್ಟಿ ಸಂಕೇಶ, ಮತ್ತು ಮಂದಿರದ ಸದಸ್ಯರುಗಳು ಹಾಗು ಊರಿನ ಗಣ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.