ಬಂಟ್ವಾಳ: ನರಿಕೊಂಬು ಗ್ರಾಪಂ ವ್ಯಾಪ್ತಿಯ ಎರಡು ಪ್ರತ್ಯೇಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೆರೆವೇರಿಸಲಾಯಿತು.ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪಾಡಿ ಅವರು ಗುದ್ದಲಿ ಪೂಜೆ ನೆರವೇರಿಸಿ, ಗ್ರಾಮದ ಅಭಿವೃದ್ದಿಯಲ್ಲಿ ಗ್ರಾಮಸ್ಥರು ಸಹಭಾಗಿತ್ವವು ಅತೀ ಅಗತ್ಯವಾಗಿದೆ.
ಮುಂದಿನ ದಿನಗಳಲ್ಲಿ ಹಂತ,ಹಂತವಾಗಿ ನರಿಕೊಂಬು ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿಗೆ ಶ್ರಮಿಸಲಾಗಿವುದು ಎಂದರು. ಸಂಸದರ ನಿಧಿ 5 ಲಕ್ಷ ಹಾಗೂ ಶಾಸಕರ ನಿಧಿ15 ಲಕ್ಷ ರೂ.ಸೇರಿದಂತೆ 20 ಲಕ್ಷರೂ.ವೆಚ್ಚದಲ್ಲಿ ಶಂಭೂರು-ಕೂಡಿಬೆಟ್ಟು ರಸ್ತೆ ಅಭಿವೃಧ್ಧಿ ಹಾಗೂ ಶಾಸಕರ ನಿಧಿ5 ಲಕ್ಷ ರೂ.ವೆಚ್ಚದಲ್ಲಿ ಶಂಭೂರು-ಮಂಜನಕೋಡಿ ರಸ್ತೆ ಅಭಿವೃದ್ದಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಕಮಾಲಾಕ್ಷಿ ಕೆ. ಪೂಜಾರಿ, ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಪಂಚಾಯತ್ ಸದಸ್ಯರಾದ ದಿವಾಕರ ಶಂಭೂರು, ಉದಯರಾಜ್, ಹೇಮಾಲತಾ ಕೆ., ಜಯರಾಜ್, ಕಿಶೋರ್ ಶೆಟ್ಟಿ, ಕಿರಿಯ ಅಭಿಯಂತರ ಕುಶು ಕುಮಾರ್, ಸ್ಥಳೀಯ ಪ್ರಮುಖರಾದ ಶ್ರೀಪತಿ ಭಟ್ ಪಳನೀರು, ಪ್ರಭಾಕರ ಭಟ್ ಕೆ., ಬೋಜರಾಜ್ ಕೆ., ಪಂಚಾಯತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಟೈಲರ್, ಕಮಾಲಾಕ್ಷ ಶಂಭೂರು, ಮಾಧವ ಪಿ., ಪ್ರೇಮನಾಥ್ ಶೆಟ್ಟಿ ಅಂತರ, ಬೂತ್ ಸಮಿತಿ ಅಧ್ಯಕ್ಷ ಯೋಗೀಶ, ಸಂತೋಷ್, ಗುತ್ತಿಗೆದಾರರಾದ ನಾಗೇಶ್ ನಾಲ, ಸಂದೇಶ್ ಉಪಸ್ಥಿತರಿದ್ದರು. ತಾ.ಪಂ. ಮಾಜಿ ಉಪಧ್ಯಾಕ್ಷ ಆನಂದ ಎ. ಶಂಭೂರು ಸ್ವಾಗತಿಸಿ,ವಂದಿಸಿದರು.
