ಬಂಟ್ವಾಳ: ಜೇಸಿಐ ಬಂಟ್ವಾಳದ 2020ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಸದಾನಂದ ಬಂಗೇರಾ ಮೊಡಂಕಾಪು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಉದ್ಯಮಿ ಗಣೇಶ್ ಕೆ. ಕುಲಾಲ್, ಕೋಶಾಧಿಕಾರಿಯಾಗಿ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‍ನ ಉಪನ್ಯಾಸಕ ಮೋಹನ್ ಎನ್. ಅವರು ಆಯ್ಕೆಗೊಂಡಿದ್ದಾರೆ.

BTW_JAN22_3 SADANANDA
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.25ರಂದು ಶನಿವಾರ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಫೈವ್‍ಸ್ಟಾರ್ ಟವರ್ಸ್‍ನ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಜೇಸಿಐನ ವಲಯ 15ರ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಪೂರ್ವ ರಾಷ್ಟ್ರೀಯ ನಿರ್ದೇಶಕ ಸಂಪತ್ ಬಿ.ಸುವರ್ಣ, ವಲಯ ಉಪಾಧ್ಯಕ್ಷ ಮೇಧಾವಿ ಎಂ., ವಲಯಾಧಿಕಾರಿ ಲೋಕೇಶ್ ಸುವರ್ಣ ಉಪಸ್ಥಿತರಿರುವರು.

By suddi9

Leave a Reply

Your email address will not be published. Required fields are marked *