ಬಂಟ್ವಾಳ: ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದುವರ್ಷದ ಆಡಳಿತ ಮಂಡಳಿಗೆ    ನೂತನ ಅಧ್ಯಕ್ಷ ರಾಗಿ ಮಲ್ಲಿಕಾ ವಿ.ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
 ಇವರು ಪ್ರಸ್ತುತ  ಬಂಟ್ವಾಳ ತಾಲೂಕು ಪಂಚಾಯತ್ ನ ಸ್ಥಾಯಿ ಸಮಿತಿ ಅದ್ಯಕ್ಷರಾಗಿಯ  ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ   ಮಹಿಳಾ ಅಧ್ಯಕ್ಷೆಯೊಬ್ಬರು  ಇದೇ ಪ್ರಥಮವಾಗಿ  ಆಯ್ಕೆಯಾಗಿದ್ದಾರೆ.
IMG-20200122-WA0018 (1)
ಉಪಾಧ್ಯಕ್ಷ ರಾಗಿ ಅಲ್ವಿನ್ ವಿನಯ್ ಲೊಬೋ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಳಿದಂತೆ ನಿರ್ದೇಶಕರಾಗಿ ನರಸಿಂಹ ಹೊಳ್ಳ, ಪದ್ಮನಾಭ ರಾವ್ ಕನಪಾಡಿ, ಬಿ.ಸುರೇಶ್ ಭಂಡಾರಿ ಅರ್ಬಿ, ಕಮಲಾಕ್ಷ, ಪ್ಲೋಸಿ ಡಿ.ಸೋಜ, ರಮೇಶ್, ಶಿವಪ್ರಸಾದ್ ಕನಪಾದೆ, ಅನಿಲ್ ಪಿಂಟೋ, ಪೂರ್ಣಿಮ ಕೆಂಪುಗುಡ್ಡೆ, ಪೂರ್ಣಿಮಾ ಬೆದ್ರಗುಡ್ಡೆ, ತೋಮಸ್ ಸಲ್ದಾನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಹಕಾರಿ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್ ಚುನಾವಣಾಧಿಕಾರಿಯಾಗಿದ್ದು, ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಅಜಯ್ ಕುಮಾರ್ ಅಜಿಲ ಸಹಕರಿಸಿದರು.
IMG-20200122-WA0019

By suddi9

Leave a Reply

Your email address will not be published. Required fields are marked *