ಬಂಟ್ವಾಳ:   ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 22ರಿಂದ ಫೆಬ್ರವರಿ 3ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಕಡೆಗಳಿಂದ ಮೆರವಣಿಗೆ ಮೂಲಕ ಹೊರೆಕಾಣಿಕೆ ಅರ್ಪಿಸಲಾಗುತ್ತಿದ್ದು, ಜನವರಿ 26ರಂದು ಬಂಟ್ವಾಳ ತಾಲೂಕಿನಿಂದ ನಡೆಯುವ ಮೆರವಣಿಗೆಗೆ ಭರದ ಸಿದ್ಧತೆ ನಡೆದಿದೆ.

IMG_20200120_103943

 ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ  ಶ್ರೀ ಧಾಮ   ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಅವರು ಈ               ಬಗ್ಗೆ ಮಾಹಿತಿಯನ್ನು ನೀಡಿದರು.

ಜ.22ರಂದು ಶಿಬರೂರು, ಅತ್ತೂರು, ಕೊಡೆತ್ತೂರು, ಜ.23ರಂದು ಸಂಜೆ ಮಂಗಳೂರು, ಜ.24ರಂದು ಬೆಳಗ್ಗೆ ಬಪ್ಪನಾಡು, ಉಳ್ಳಾಲ ಸಂಜೆ ಬಜಪೆ, ಜ.25ರಂದು ಕಾಸರಗೋಡು, ಸುಳ್ಯ, ಜ.26ರಂದು ಬಂಟ್ವಾಳ ತಾಲೂಕು, ಜ.27ರಂದು ಬೆಳಗ್ಗೆ ಪುತ್ತೂರು , ಸಂಜೆ ಕಾವೂರು, ಕಳತ್ತೂರು, ಜ.28ರಂದು ಉಡುಪಿ ಮತ್ತು ಜ.29ರಂದು ಬೆಳ್ತಂಗಡಿಯಿಂದ ಹೊರೆಕಾಣಿಕೆ ಬರಲಿದೆ ಎಂದು ಹೇಳಿದರು.      ಜ.26ರಂದು ಬಂಟ್ವಾಳ ತಾಲೂಕಿನಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆಯನ್ನು ಔಚಿತ್ಯಪೂರ್ಣವಾಗಿಸಬೇಕು ಎಂಬ ನೆಲೆಯಲ್ಲಿ ವ್ಯಾಪಕವಾದ ತಯಾರಿ ನಡೆಸಲಾಗುತ್ತಿದೆ.ತಾಲೂಕಿನ ಪ್ರತಿ ಗ್ರಾಮ,ಭಜನಾಮಂದಿರ,ವಿವಿಧ ಸಂಘಸಂಸ್ಥೆಗಳಿಂದ ಹೊರೆಕಾಣಿಕೆಯನ್ನು ತಂದೊಪ್ಪಿಸಲು ಸೂಚಿಸಲಾಗಿದೆ. ದೇವತಾ ಸೇವೆ ಮತ್ತು ಸಮರ್ಪಣಾ ಮನೋಭಾವದಿಂದ ಆಗಮಿಸುವ ಭಕ್ತರಿಗೆ ಅಂದು ಕ್ಷೇತ್ರಕ್ಕೆ ಬಿ.ಸಿ.ರೋಡಿನಿಂದ ಉಚಿತ ಬಸ್ ವ್ಯವಸ್ಥೆಯೂ ಇದೆ. ಸುಮಾರು 250ಕ್ಕೂ ಅಧಿಕ ವಾಹನಗಳನ್ನು ನಿರೀಕ್ಷಿಸಲಾಗಿದ್ದು, ಹೊರೆಕಾಣಿಕೆಗೆ ಮಲೆಬೆನ್ನೂರು, ಟೈಗರ್ ಬ್ರಾಂಡ್ ಬೆಳ್ತಿಗೆ ಅಕ್ಕಿ, ಸಕ್ಕರೆ, ಹೆಸರುಬೇಳೆ, ಕಡ್ಲೆಬೇಳೆ,ಮೆಣಸು, ದಿನಸಿ ಸಾಮಾನು, ತೆಂಗಿನಕಾಯಿ, ಸುವರ್ಣಗಡ್ಡೆ, ಕುಂಬಳಕಾಯಿ, ಸಿಹಿಕುಂಬಳ, ಬಾಳೆ ಎಲೆ, ಸೌತೆ, ತುಪ್ಪ, ಕರ್ಪೂರ, ಬೆಲ್ಲ, ಅವಲಕ್ಕಿ, ಎಳ್ಳೆಣ್ಣೆ, ನಾಗಮಂಡಲಕ್ಕೆ ಅಗತ್ಯವಿರುವ ಕಂಗಿನ ಹೂ ಪಿಂಗಾರ ಇತ್ಯಾದಿಯನ್ನು ನೀಡಬಹುದು ಎಂದರು. ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಸಮೀಪದ ಮೈದಾನದಲ್ಲಿ ಮಧ್ಯಾಹ್ನ 2.30ರವರೆಗೆ ಒಟ್ಟು ಸೇರಿ ಮೆರವಣಿಗೆ ಮೂಲಕ ಕೈಕಂಬ ಪೊಳಲಿ ದ್ವಾರದ ತನಕ ತೆರಳಿ ಬಳಿಕ ವಾಹನದಲ್ಲಿ ಕ್ಷೇತ್ರ ತಲುಪಲಾಗುತ್ತದೆ ಎಂದವರು ವಿವರಿಸಿದರು.

ಭೂದಾನ ಸೇವೆಗೆ ಸಹಕರಿಸಿ: ಈಗಾಗಲೇ ಕಟೀಲು ಭೂದಾನ ಸೇವೆಗೆ ಮಾಣಿಲದಿಂದ 3. ಲಕ್ಷ ರೂ ನೀಡುವುದಾಗಿ ಘೋಷಿಸಿದ್ದು, ಮುಂದಕ್ಕೂ ಇದು ಮುಂದುವರಿಯಲಿದೆ ಎಂದ ಸ್ವಾಮೀಜಿ, ಭಕ್ತರೇ ಮಾಡುವ ಕಾರ್ಯಕ್ರಮವಾದ ಭೂದಾನ ಸೇವೆಗೆ ಊರ, ಪರವೂರ ಭಕ್ತಾಭಿಮಾನಿಗಳು ಸಹಕರಿಸಲು ವಿನಂತಿಸಿದರು. ಇದಕ್ಕೆ ಪ್ರತ್ಯೇಕ ರಶೀದಿ ಮಾಡಲಾಗುವುದು, ಇದೊಂದು ಶಾಶ್ವತವಾಗಿ ಉಳಿಯುವ ಸೇವೆಯಾಗಿದ್ದು, ಈಗಾಗಲೇ ಬಂದ ಧನಸಹಾಯವನ್ನು ಭೂಖರೀದಿಗೆ ವಿನಿಯೋಗಿಸಲಾಗಿದೆ. ಕುಟಂಬದ ಹೆಸರಲ್ಲಿ, ಮನೆತನದ ಹೆಸರಲ್ಲಿ ಹಾಗೆಯೇ ವೈಯಕ್ತಿಕ ನೆಲೆಯಲ್ಲಿಯು ದೇಣಿಗೆ ನೀಡಲು ಅವಕಾಶವಿದೆ ಎಂದು ಶ್ರೀ ಗಳು  ಪ್ರತಿಯೊಂದು ಪೈಸೆಯೂ ಸದ್ವಿನಿಯೋಗವಾಗಲಿದೆ ಎಂದರು. ಇದರಿಂದಾಗಿ ಕಟೀಲು ಕ್ಷೇತ್ರದಲ್ಲಿ ಪಾರ್ಕಿಂಗ್ ಸಹಿತ ಬಹುತೇಕ ಸಮಸ್ಯೆಗೆ ಪರಿಹಾರ ದೊರಕಲಿದೆ, ಅಲ್ಲಿ ಪ್ರತಿದಿನ ಸ್ವಯಂಸೇವಕರು ಸಮಸ್ಯೆ ಅನುಭವಿಸುವುದು ಹಾಗೂ ಭಕ್ತರು ಪರದಾಡುವುದು ತಪ್ಪುತ್ತದೆ. ಖರೀದಿಸಿದ ಭೂಮಿಯಲ್ಲಿ ಯಾವುದೇ ಕಮರ್ಷಿಯಲ್ ಕಟ್ಟಡ ನಿರ್ಮಿಸಲಾಗುವುದಿಲ್ಲ ಎಂದವರು  ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ತಾರಾನಾಥ ಕೊಟ್ಟಾರಿ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು,.

 

 

By suddi9

Leave a Reply

Your email address will not be published. Required fields are marked *