ಮೂಡುಬಿದಿರೆ:ಪೌರತ್ವ ಕಾಯ್ದೆ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದೆ ಗೊಂದಲಕ್ಕೆ ಕಾರಣವಾಗಿದೆ. ಈ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ನಮ್ಮಲ್ಲಿರುವ ಅಪನಂಬಿಕೆಗಳೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ ಎಂದು ಯುವ ವಕೀಲ ಶರತ್ ಡಿ. ಶೆಟ್ಟಿ ಹೇಳಿದರು.

ನಡ್ಯೋಡಿ ಯುವಕ ಮಂಡಲ ಮಾರ್ಪಾಡಿ-ಕಲ್ಲಬೆಟ್ಟು ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಸದೃಢ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ದೊಡ್ಡದು. ನಮ್ಮ ಸಂಸ್ಕøತಿ, ಪರಂಪರೆ ಉಳಿಸಬೇಕಾದ ಯುವಕರೆ ದಾರಿ ತಪ್ಪುತ್ತಿದ್ದಾರೆ. ದೇಶವನ್ನು ದುರ್ಬಲಗೊಳಿಸಲು ಬಾಹ್ಯ ಶಕ್ತಿಗಳು ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಜಾಗೃತರಾಗಬೇಕು ಎಂದರು. ಮಾರೂರು ಖಂಡಿಗ ರಾಮದಾಸ್ ಅಸ್ರಣ್ಣ ನೂತನ ಕಲಾಮಂಟಪವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಉದ್ಯಮಿ ಐತಪ್ಪ ಆಳ್ವ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ದಯಾನಂದ ಬಿ. ಕೋಟ್ಯಾನ್, ವೈ.ಶಶಿಕಾಂತ್ ಜೈನ್, ಪ್ರಸನ್ನ ಹೆಗ್ಡೆ, ಶ್ರೀಜಾ ಶೆಟ್ಟಿ, ಪ್ರತಿಭಾ ಎಸ್.ರೈ, ಉದಯ ಹೆಗ್ಡೆ, ಅನಿಖೇತ್ ವಿ. ಕೋಟ್ಯಾನ್, ಸಂಕೇತ್ ಆಚಾರ್ಯ ಹಾಗೂ ತುಳು ನಾಟಕ ನಿರ್ದೇಶಕ ರಾಜೇಶ್ ಆಚಾರ್ಯ ಪರ್ಕಳ ಇವರನ್ನು ಸನ್ಮಾನಿಸಲಾಯಿತು.
ಸಂಘದ ಸ್ಥಾಪಕ ಸದಸ್ಯರನ್ನು ಹಾಗೂ ದಾನಿಗಳನ್ನು ಗೌರವಿಸಲಾಯಿತು. ಯುವಕ ಮಂಡಲದ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಹೋಟೆಲ್ ಉದ್ಯಮಿ ತಿಮ್ಮಯ್ಯ ಶೆಟ್ಟಿ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಎಂ. ವಸಂತ ಶೆಟ್ಟಿ, ಸ್ಥಾಪಕ ಸದಸ್ಯರಾದ ಮೋಹನ್‍ದಾಸ್ ದೇವಾಡಿಗ, ಎಂ. ಪುರುಷೋತ್ತಮ ಶೆಟ್ಟಿ, ನಡ್ಯೋಡಿ ದೈವಸ್ಥಾನ ಸೇವಾ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ರೈತ ಸಂಘದ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತ ಕೋಟ್ಯಾನ್ ಉಪಸ್ಥಿತರಿದ್ದರು.
ಸಂಘದ ಸದಸ್ಯ ಅಶೋಕ್ ಕುಮಾರ್ ಜೈನ್ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಕೋಟ್ಯಾನ್ ಸಂದೇಶ ವಾಚನಗೈದರು. ಕ್ರೀಡಾ ಕಾರ್ಯದರ್ಶಿ ಅಭಿಷೇಕ್ ಜೆ. ದೇವಾಡಿಗ ಕ್ರೀಡಾ ವಿಜೇತರ ಪಟ್ಟಿ ಓದಿದರು. ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷೆ ಗೀತಾ ಪಿ. ಶೆಟ್ಟಿ ವಂದಿಸಿದರು.
