ಬಂಟ್ವಾಳ : ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ೮ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಜಯಭೇರಿ ಸಾಧಿಸಿದೆ.   ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆಯಿತು.

ಸಂಘದ  ೫ ಸ್ಥಾನಗಳಿಗೆ ಸಹಕಾರ ಭಾರತಿಯ ಅಭ್ಯರ್ಥಿಗಳು ಅವಿರೋಧ ಆಯ್ಕೆ ನಡೆದಿದ್ದರೆ ಉಳಿದ ಸ್ಥಾನಗಳಿಗೆ ಚುನಾವಣೆ ನಡೆದಿತ್ತು,. ಎಲ್ಲಾ ಸ್ಥಾನಗಳನ್ನೂ -ಸಹಕಾರ ಭಾರತಿ ಬಾಚಿಕೊಂಡಂತಾಗಿದೆ. ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ೮ ಸ್ಥಾನಗಳಿಗೆ ಜ. ೧೨ರಂದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿ-ಸಹಕಾರ ಭಾರತಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜತೆಗೆ ೫ ಸ್ಥಾನಗಳಿಗೆ ಬಿಜೆಪಿ-ಸಹಕಾರ ಭಾರತಿಯ ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಿದ್ದು.

ಆ ಮೂಲಕ ಎಲ್ಲಾ ಸ್ಥಾನಗಳನ್ನೂ ಬಿಜೆಪಿ-ಸಹಕಾರ ಭಾರತಿ ಬಾಚಿಕೊಂಡAತಾಗಿದೆ. ಚುನಾವಣೆಯಲ್ಲಿ ನಿರ್ದೇಶಕರಾಗಿ ಪದ್ಮನಾಭ ಬಿ, ಭವಾನಿಶಂಕರ ರಾವ್, ಕೆ.ಎನ್.ಶೇಖರ, ರಾಮಚಂದ್ರ ಗೌಡ ಮಣಿ, ಎಂ.ಮಹಾಬಲ ಶೆಟ್ಟಿ, ವಿಠಲ ಪೂಜಾರಿ ಪುಂಡಿಬೈಲು, ಎಂ.ಲಕ್ಷ್ಮಿ ವಿ. ಪ್ರಭು, ವಿದ್ಯಾವತಿ ಜಯಗಳಿಸಿದ್ದಾರೆ. ಉಳಿದಂತೆ   ಪ್ರಕಾಶ್ ಕೆ., ಹರೀಶ್ ನಾಯ್ಕ, ಕರುಣೇಂದ್ರ ಪೂಜಾರಿ ಕೊಂಬ್ರಬೈಲು,  ಮನೋಹರ ಮೂಲ್ಯ, ಬಸ್ತಿ ಸದಾಶಿವ ಶೆಣೈ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *