ಉಳ್ಳಾಲ: ಕುರ್ಚಿಗಳನ್ನು ತುಂಬಿದ್ದ ಈಚರ್ ವಾಹನವೊಂದು ಬೆಂಕಿಗಾಹುತಿಯಾದ ಘಟನೆ ತಡರಾತ್ರಿ 2.30ರ ಸುಮಾರಿಗೆ ದೇರಳಕಟ್ಟೆಯಲ್ಲಿ ನಡೆದಿದೆ. ದೇರಳಕಟ್ಟೆಯ ಸಿಟಿ ಗ್ರೌಂಡ್ ನಲ್ಲಿ ರವಿವಾರ ಏರ್ಪಡಿಸಿದ್ದ ಪೌರತ್ವ ಕಾಯಿದೆ ವಿರೋಧಿಸಿ ಮುಸ್ಲಿಂ ಸಂಘನೆಗಳ ಪ್ರತಿಭಟನಾ ಸಭೆಯ ಬಳಿಕ ಕುರ್ಚಿಗಳನ್ನು ತುಂಬಿದ ಈಚರ್ ಲಾರಿಯನ್ನು ಇಲ್ಲೇ ಇರಿಸಲಾಗಿತ್ತು.

WhatsApp Image 2020-01-13 at 11.25.59

ತಡ ರಾತ್ರಿ 2:30 ಗಂಟೆ ಸುಮಾರಿಗೆ ಬೆಂಕಿ ತಗುಲಿದ್ದು, ಸಂಪೂರ್ಣ ಸುಟ್ಡು ಹೋಗಿದೆ. ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.

 

By suddi9

Leave a Reply

Your email address will not be published. Required fields are marked *