ಮಂಗಳೂರು: ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹಾಗೂ ಕಾರ್ಮಿಕ ವರ್ಗದ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಕಾರ್ಮಿಕರ ಒಕ್ಕೂಟಗಳ ಕರೆಯಂತೆ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಬುಧವಾರ ಪ್ರತಿಭಟನಾ ಸಭೆ ನಡೆಯಿತು.
ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್, ಎಚ್ ಎಂ ಎಸ್ ಕಾನೂನು ಸಲಹೆಗಾರ, ವಕೀಲ ಉಮೇಶ್ ಕುಮಾರ್ ವೈ, ಸಿಐಟಿಯುಸಿ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ, ಎನ್ ಎಫ್ ಡಬ್ಲ್ಯೂ ಜಿಲ್ಲಾ ಕಾರ್ಯ ಭಾರತೀ ಪ್ರಶಾಂತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕಾರ್ಮಿಕ ಸುಧಾರಣೆ, ವಿದೇಶಿ ನೇರ ಹೂಡಿಕೆ ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರಕಾರದ ಕಾರ್ಮಿಕರ ವಿರೋಧಿ ನೀತಿಗಳ ವಿರುದ್ಧ ಮತ್ತು ಕನಿಷ್ಠ ವೇತನ ಹಾಗೂ ಸಾಮಾಜಿಕ ಸುರಕ್ಷತೆಯ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಸುಮಾರು 14 ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿವೆ.
ಈ ಸಂದರ್ಭದಲ್ಲಿ ಡಿವೈಎಫ್ ಐ ತಾಲೂಕು ಕಾರ್ಯದರ್ಶಿ, ವಕೀಲ ತುಳಸಿದಾಸ್, ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಶ್ರೀನಿವಾಸ್ ಭಂಡಾರಿ, ಸುರೇಂದ್ರ ಕೋಟ್ಯಾನ್, ಸಂಜೀವ ಬಂಗೇರ, ಉದಯ ಕುಮಾರ್, ಸರಸ್ವತಿ ಕಡೇಶಿವಾಲಯ, ರಾಜಾ ಚಂಡ್ತಿಮಾರ್, ಬಿ.ಬಾಬು ಭಂಡಾರಿ, ರತಿ ಎಸ್. ಭಂಡಾರಿ, ಶಮಿತಾ, ಜಯಂತ ಕೆ, ಹರ್ಷಿತ್, ಪಿ.ವಿಠಲ ಬಂಗೇರ, ಸೀತಾ ಅನಂತಾಡಿ, ಕವಿತಾ, ಬಿದಿರು, ಲೋಲಾಕ್ಷಿ, ಉದಯ ಕುಮಾರ್, ಸುರೇಂದ್ರ ಕೋಟ್ಯಾನ್, ಟೂರಿಸ್ಟ್ ವಾಹನ ಚಾಲಕರ ಸಂಘದ ಅಧ್ಯಕ್ಷ ಸುರೇಶ್ ವಕೀಲ ಮುಹಮ್ಮದ್ ಕಬೀರ್ ಉಪಸ್ಥಿತರಿದ್ದರು. ಎಐಟಿಯುಸಿ ಜಿಲ್ಲಾ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ ಸ್ವಾಗತಿಸಿ, ವಂದಿಸಿದರು.



