ಬೆಂಗಳೂರು: ಹೊಸ ವರ್ಷ ಆರಂಭವಾದಂದಿನಿಂದ ಹಿಡಿದು ಇಂದಿನವರೆಗು ಚಿನ್ನದ ಬೆಲೆ ಏರುತ್ತಲೆ ಇದೆಯೆ ಹೋರತು ಇಳಿಕೆ ಕಂಡಿದ್ದೇ ಇಲ್ಲ, ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ 780 ರೂಪಾಯಿ ಏರಿಕೆಯಾಗಿದ್ದು, ಇರಾನ್ -ಅಮೆರಿಕ ಯುದ್ದದ ಬಿಸಿಯ ಕಾವು ಭಾರತಕ್ಕೆ ಚಿನ್ನ ,ಬೆಳ್ಳಿ, ತೈಲದ ರೂಪದಲ್ಲಿ ತಟ್ಟುತ್ತಿದೆ.

sg4roPhbjaefb

ಒಂದೆಡೆ ಚಿನ್ನ , ತೈಲದ ಬೆಲೆ ದಿನೇ ದಿನೇ ಗಗನ ಮುಟ್ಟುತ್ತಿದ್ದರೆ, ಇನ್ನೊಂದೆಡೆ ರುಪಾಯಿಯ ಮೌಲ್ಯ ಪಾತಾಳ ಮುಟ್ಟುತ್ತಿದೆ. 24 ಕ್ಯಾರೆಟ್ ಚಿನ್ನದ ದರದಲ್ಲಿ 780 ರೂಪಾಯಿ ಏರಿಕೆಯಾಗಿದ್ದು, ಬೆಳ್ಳಿ ದರ 50 ಸಾವಿರ ಗಡಿ ದಾಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸೋಮವಾರ ಪ್ರತಿ ಹತ್ತು ಗ್ರಾಮ್‌ಗಳಿಗೆ 41,730 ರೂ.ಗೆ ತಲುಪುವುದರೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದ್ದಲ್ಲದೆ, ಹಟ್ಟಿ ಚಿನ್ನದ ಗಣಿಗೆ 80 ಕೋಟಿ ರು.ರಷ್ಟು ಲಾಭ ಪಡೆದಿದೆ.

ಬೆಳ್ಳಿಯೂ ಕೂಡ ಹಿಂದೆ ಬಿದ್ದಿಲ್ಲ. ಹಿಂದಿನ ವಹಿವಾಟಿನ ದಿನ ಪ್ರತಿ ಕೆ.ಜಿ.ಗೆ 48,325 ರೂ. ಇದ್ದಿತ್ತು ಆದರೆ ಸೋಮವಾರ ಬೆಳ್ಳಿಗೆ 1,105 ರೂ.ಗಳಷ್ಟು ಏರಿಕೆಯಾಗಿ 49,430 ರೂ.ಗೆ ತಲುಪಿದೆ. ಚಿನ್ನ ‌, ಬೆಳ್ಳಿ ಬೆಲೆ ಏರಿಕೆ ಜೋತೆಗೆ ರುಪಾಯಿ ಮೌಲ್ಯ ಕುಸಿದಿದೆ , ನಿನ್ನೆ ಡಾಲರ್ ಎದುರು 33 ಪೈಸೆಗಳನ್ನು ಕಳೆದುಕೊಂಡು 72.11ಕ್ಕೆ ಕುಸಿದಿದ್ದ ರೂಪಾಯಿ ಸಂಜೆಯ ವೇಳೆಗೆ 71.93ಕ್ಕೆ ರಷ್ಟು ಕುಸಿದಿದೆ, ಇದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

By suddi9

Leave a Reply

Your email address will not be published. Required fields are marked *