ಕೈಕಂಬ: ಗುರುಪುರದ ಶ್ರೀ ವಜ್ರದೇಹಿ ಮಠದಲ್ಲಿ* ನಡೆದ ಗುರುದಯ ತಂಡದ *ರಂಗ್ ದ ಕಲಾವಿದೆರ್* ಗುರುಪುರ ಮಂಗಳೂರು ತಂಡದ ವಿಭಿನ್ನ ಶೈಲಿಯ ಕುತೂಹಲಭರಿತ ಹಾಸ್ಯಮಯ ನಾಟಕ *ಮೆಲ್ಲ ಪಾತೆರ್ಲೆ* ಯಶಸ್ವಿ ಪ್ರದರ್ಶನ ಕಂಡಿತು,
ತಂಡದ ಎಲ್ಲಾ ಕಲಾವಿದರು ಪಾತ್ರಕ್ಕೆ ಜೀವ ತುಂಬಿ ಅಭಿನಯ ನೀಡಿದರು,ತಂಡದ ಸಾರಥಿ ಪ್ರಶಾಂತ್ ಗುರುಪುರ* ಅವರ ಕಥಾ ಹಂದರ ನಾಟಕದ ಉದ್ದಕೂ ರೋಚಕತೆಯನ್ನು ಸೃಷ್ಟಿಸಿತು,ಪಚ್ಚು ಕೈಕಂಬ ಅವರ ದಕ್ಷ ನಿರ್ದೇಶನ, ಜಿ .ಎಸ್ ಗುರುಪುರ ಅವರ ಸಾಹಿತ್ಯ ಸಮಗ್ರ ನಿರ್ವಹಣೆ ನಾಟಕಕ್ಕೆ ಉತ್ತಮ ಲೇಪನ ನೀಡಿತು , ಹಾಸ್ಯದ ಮೂಲಕ ಜನರನ್ನು ನಗೆ ಕಡಲಲ್ಲಿ ತೇಲಿಸಿ ಪ್ರಸಂಶೆಗೆ ಪಾತ್ರವಾಯಿತು.
*ವಿಶೇಷ ಆಕರ್ಷಣೆ ಎಂಬಂತೆ ರಂಗದ ಮೇಲೆ ದೈವದ ಮೊಗದ ಪ್ರವೇಶ ಜೊತೆಗೆ ಪಂಚ ಜೀಟಿಗೆಯ ನರ್ತನ ಕಲಾಭಿಮಾನಿಗಳ ಮೈ ನವಿರೇಳಿಸಿತು* , ಗುಣಶೀಲ ಹಾಗು ಗುಲಾಬಿ ಅಕ್ಕನ ಪಾತ್ರಗಳು ನೆನಪಿನಲ್ಲಿ ಉಳಿಯುತ್ತದೆ .ನೈಜ ಘಟನೆ ಆಧಾರಿತ ಕಥೆಯೊಂದಿಗೆ ದೈವದ ಕಾರ್ಣಿಕದ ಅನಾವರಣ ವ್ಯಕ್ತಿಗಿಂತ ಶಕ್ತಿ ಮೇಲು ಎಂಬ ಸತ್ಯದ ದರ್ಶನ ಈ ಮೆಲ್ಲ ಪಾತೆರ್ಲೆ ನಾಟಕ ತುಳು ರಂಗಭೂಮಿಗೆ ಒಂದು ಉತ್ತಮ ಕೊಡುಗೆ ಎಂದರೆ ತಪ್ಪಾಗಲಾರದು.