ಬಂಟ್ವಾಳ: ಹಿರಿಯ ಟೈಲರ್ ಬಂಟ್ವಾಳ ವಿಶ್ವನಾಥ ನಾಯ್ಕ್ (84) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಜಿ.ಹಿತ್ಲುವಿನಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಪತ್ರಕರ್ತ ವೆಂಕಟೇಶ್ ಬಂಟ್ವಾಳ ,ಮೂವರು, ಪತ್ರಿಯರು,ಅಳಿಯಂದಿರು,ಮೊಮ್ಮಕ್ಕಳ ಸಹಿತ ಅಪಾರ ಬಂದು ,ಮಿತ್ರರನ್ನು ಅಗಲಿದ್ದಾರೆ.ಬಂಟ್ವಾಳ ಪರಿಸರದಲ್ಲಿ ಟೈಲರ್ ವಿಶ್ವಣ್ಣ ಎಂದೇ ಚಿರಪರಿಚಿತರಾಗಿದ್ದು, ಇತ್ತಿಚೆಗಷ್ಟೇ ಕರ್ನಾಟಕ ಟೈಲರ್ಸ್ ಅಸೋಸಿಯೇಷನ್ ಬಂಟ್ವಾಳ ಕ್ಷೇತ್ರದ ವತಿಯಿಂದ ಸನ್ಮಾನಿಸಲ್ಪಟ್ಟಿದ್ದರು.
ಮಾಜಿ ಸಚಿವ ರಮಾನಾಥ ರೈ,ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್,ಮಾಜಿ ಪುರಸಭಾಧ್ಯಕ್ಷ ದಿನೇಶ್ ಭಂಡಾರಿ,ಗಾಳದಕೊಂಕಣಿ ಅಭ್ಯುದಯ ಸಂಘದ ಉಪಾಧ್ಯಕ್ಷ ರಂಜನ್ ಎಂ.,ಜತೆ ಕಾರ್ಯದರ್ಶಿ ಆಶಾ ನಾಯ್ಕ್ ಗೋರಿಗುಡ್ಡೆ, ಮಾಜಿ ಅಧ್ಯಕ್ಷ ಉಮಾನಾಥ ನಾಯ್ಕ್ ಉಳ್ಳಾಲ,ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಶಿವಾನಂದ ನಾಯ್ಕ್,ಗೌರವಾಧ್ಯಕ್ಷ ವಿಶ್ವನಾಥ್ ನಾಯ್ಕ್,ಶರತ್ ನಾಯ್ಕ್ ಮಾರ್ನಮಿಕಟ್ಟೆ,ವಿಜಯ ಕುಮಾರ್ ಬಜಾಲ್,ವೆಂಕಪ್ಪ ಪೂಜಾರಿ ಬಂಟ್ವಾಳ ,ಬಂಟ್ವಾಳ ಭೂಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್,ಪುರಸಭಾ ಸದಸ್ಯ ವಾಸುಪೂಜಾರಿ ಸಹಿತ ಹಲವಾರು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.ಶಾಸಕ ಯು.ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಬಿಜೆಪಿ ಮುಖಂಡರಾದ ದೇವದಾಸ ಶೆಟ್ಟಿ ತಾಪಂ ಸದಸ್ಯ ಪ್ರಭಾಕರ ಪ್ರಭು, ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ, ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯಕ್,ಪ್ರ.ಕಾರ್ಯದರ್ಶಿ ಯು.ದಯಾನಂದ ನಾಯಕ್ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

