ಕೈಕಂಬ: ಮಕ್ಕಳು ಕನಸುಗಾರರಾಗಬೇಕು. ಹೆತ್ತವರು ಮಕ್ಕಳ ಅವಶ್ಯಕತೆ ಪೂರೈಸಬೇಕೇ ಹೊರತು ಆಸೆಗಳನ್ನಲ್ಲ. ಹೆತ್ತವರು ಮಕ್ಕಳ ಮನಸ್ಸಿಗೆ ಇಳಿದು, ಅವರ ಆಶೋತ್ತರ ಅರಿತುಕೊಂಡು ಮಾರ್ಗದರ್ಶಕರಾಗಬೇಕು. ಈ ನಿಟ್ಟಿನಲ್ಲಿ ಸ್ವೀಕಾರ, ಗಮನ, ಪ್ರೀತಿ ಮತ್ತು ಮೆಚ್ಚುಗೆ ಮಕ್ಕಳಿಗೆ ಪಾಲಕರ ರಕ್ಷಾಕವಚವಾಗಬೇಕು ಎಂದು ಕೈಕಂಬ ರೋಸಾ ಮಿಸ್ತಿಕಾ ಶಾಲೆಯ ನಿವೃತ್ತ ಶಿಕ್ಷಕ ಶ್ರೀಧರ್ ಜೈನ್ ಎಂದು ಹೇಳಿದರು. ಅವರು ಡಿ. 28ರಂದು ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.gur-dec-28-makkala nruthya-2

ಅಧ್ಯಕ್ಷತೆ ವಹಿಸಿದ ದಕ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಮಾತನಾಡಿ, ಇಲ್ಲಿನ ಅನುಭವಿ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದಿಂದ ಮಕ್ಕಳ ಶೈಕ್ಷಣಿಕ ಬದುಕು ಉತ್ತಮವಾಗುತ್ತಿದ್ದು, ಶಾಲೆಯ ಕೀರ್ತಿ ಎಲ್ಲೆಡೆ ಪಸರುತ್ತಿದೆ. ಪಾಲಕರ ಸಲಹೆ-ಸೂಚನೆಯಿಂದ ಶಾಲೆ ಬೆಳೆಯುತ್ತಿದೆ ಎಂಬುದು ಹೆಮ್ಮೆಯ ವಿಚಾರ ಎಂದರು.29vp shara

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಕೇಶವ ಎಚ್ ಹಾಗೂ ಶಿಕ್ಷಕಿ ಸುಗುಣಾರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕ ಎ ಕೆ ಇಸ್ಮಾಯಿಲ್, ಪಿಟಿಎ ಅಧ್ಯಕ್ಷ ವಿಶ್ವಂಭರ, ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್‍ನ(ಎಂಡಬ್ಲ್ಯೂಎ) ಎನ್ ಇ ಮೊಹಮ್ಮದ್, ಶಾಲಾ ಅಧ್ಯಕ್ಷ ಹಾಜಿ ಎಂ ಎಚ್ ಮೈಯ್ಯದ್ದಿ, ಪಿಟಿಎ ಉಪಾಧ್ಯಕ್ಷೆ ವಿದ್ಯಾಶ್ರೀ, ಎಂಡಬ್ಲ್ಯೂಎ ಖಜಾಂಚಿ ಎನ್ ಇಸ್ಮಾಯಿಲ್, ಗುರುಪುರ ಗ್ರಾಪಂ ಸದಸ್ಯರಾದ ಎ ಕೆ ಅಶ್ರಫ್ ಮತ್ತು ಎ ಕೆ ಮೊಹಮ್ಮದ್, ಶಾಲಾ ಸಮಿತಿ ಸದಸ್ಯರಾದ ಎ ಜೆ ಅಬ್ದುಲ್ ರಹಿಮಾನ್, ಜಿ ಅಬ್ದುಲ್ ರಹಿಮಾನ್ ಮತ್ತು ಕೆ ಆದಂ, ಮೊಹಮ್ಮದ್ ಶಕೀರ್(ಕರಾಟೆ) ಮತ್ತಿತರರು ಉಪಸ್ಥಿತರಿದ್ದರು. ಮಕ್ಕಳು, ಪಾಲಕರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಸಂಭ್ರಮೋಲ್ಲಾಸದಿಂದ ವಾರ್ಷಿಕೋತ್ಸವ ನಡೆಯಿತು.29vp shara

ಮುಖ್ಯ ಶಿಕ್ಷಕ ಕೇಶವ ಎಚ್ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಪ್ರೌಢಶಾಲಾ ಸಂಯೋಜಕ ಹರೀಶ್ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕ ವಾದಿರಾಜ ಕಲ್ಲೂರಾಯ ವಂದಿಸಿದರು. ಬಳಿಕ ಬಹುಮಾನ ವಿತರಣೆ ಹಾಗೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ, ಮನೋರಂಜನಾ ಕಾರ್ಯಕ್ರಮ ಜರುಗಿತು.

By suddi9

Leave a Reply

Your email address will not be published. Required fields are marked *