ಬಂಟ್ವಾಳ: ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿದ್ದು 36ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 12ನೇ ವರ್ಷದ ಸಾಮೂಹಿಕ ವಿವಾಹದ ಸಿದ್ಧತೆಯಲ್ಲಿದೆ. ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಮಾ. 8ರಂದು ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು ಅರ್ಹ ವಧು-ವರರು ಫೆ. 25ರ ಒಳಗೆ ನೊಂದಾಯಿಸಬಹುದಾಗಿದೆ.

7.samuhika vivaha
ಆಸಕ್ತ ವಧು-ವರರು ಸೂಕ್ತ ದಾಖಲೆ ಪತ್ರಗಳೊಂದಿಗೆ ಕ್ಲಬ್‍ನ ಕಛೇರಿಯಲ್ಲಿ ಸಂಪರ್ಕಿಸಬಹುದು. ವಿವಾಹವಾಗುವ ವಧುವಿಗೆ ಚಿನ್ನದ ತಾಳಿ ಹಾಗೂ ವಧು-ವರರಿಗೆ ಮಂಗಳ ವಸ್ತ್ರ ನೀಡಲಾಗುವುದು. ಹಾಗೂ ಸರಕಾರದ ವತಿಯಿಂದ ಪ್ರತೀಜೋಡಿಯ ಖಾತೆಗೆ ಐವತ್ತು ಸಾವಿರ ರೂ. ನೀಡಲಾಗುವುದು. ಕೇವಲ ಹತ್ತು ಜೋಡಿ ವಧು-ವರರಿಗೆ ಮಾತ್ರ ಅವಕಾಶವಿದ್ದು, ಅವಿಭಜಿತ ದ.ಕ. ಜಿಲ್ಲೆಯ ಅನಾಥ, ಬಡ ಕುಟುಂಬದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಪಿ. ಬಂಗೇರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Swasthik Friends New Logo

By suddi9

Leave a Reply

Your email address will not be published. Required fields are marked *