ಉಡುಪಿ : ಬ್ರಹ್ಮಾವರದ ಅಪ್ಪ-ಅಮ್ಮ ಅನಾಥಾಲಯದಲ್ಲಿ ಪುರ್ನವಸತಿ ಪಡೆದಿರುವ ವ್ಯಕ್ತಿಯೊರ್ವರು ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದೆ ಅವರನ್ನು ಆಶ್ರಮ ಸಂಚಾಲಕರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದರು. ಇವಾಗ ರೋಗಿಯು ಚಿಕಿತ್ಸೆಗೆ ಸ್ಪಂದಿಸದೆ, ಡಿ.26, ಗುರುವಾರ ದಿನ ಮೃತಪಟ್ಟಿದ್ದು, ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದೆ. ಸಂಬಂಧಿಕರು ಮೃತನ ಕಳೇಬರವನ್ನು ಕೊಂಡೈಯುವಂತೆ ಆಶ್ರಮ ಸಂಚಾಲಕರು ವಿನಂತಿಸಿ ಕೊಂಡಿದ್ದಾರೆ
ಸೊಂಟದ ಸ್ವಾಧಿನ ಕಳೆದುಕೊಂಡಿರುವ ಯುವಕನೊರ್ವ ಬೀದಿಯಲ್ಲಿ ತೆವಳುತ್ತ, ಭಿಕ್ಷೆ ಎತ್ತಿಕೊಂಡು, ನಾಗರಿಕ ಸಮಾಜದಲ್ಲಿ ಚಿಂತಾಜನಕವಾಗಿ ಬದುಕು ಸಾಗಿಸುತ್ತಿರುವುದನ್ನು ಕಂಡ, ದಯಾಗುಣದ ಪುಣ್ಯಾತ್ಮರು ಆತನ ರಕ್ಷಿಸಿ ಬ್ರಹ್ಮಾವರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಅಪ್ಪ-ಅಮ್ಮ’ ಅನಾಥಾಲಯದಲ್ಲಿ ಕೆಲವು ತಿಂಗಳುಗಳ ಹಿಂದೆ ನೆಲೆ ಕಲ್ಪಿಸಿದ್ದರು. ಅನಾಥಾಲಯ ಸಂಚಾಲಕ ಪ್ರಶಾಂತ ಪೂಜಾರಿ ಅವರು ಯುವಕನಿಗೆ ಚಿಕಿತ್ಸೆ ನೀಡಿ ಅನಾಥಪ್ರಜ್ಞೆ ಕಾಡದಂತೆ, ಇದುವರೆಗೆ ಪೋಷಣೆ ಮಾಡಿಕೊಂಡು ಬಂದಿದ್ದರು.
ರೋಗಿಯು ತನ್ನ ಹೆಸರು ಸತೀಶ್ ಶೆಟ್ಟಿ (40ವ), ತಾನು ಬಂಟ ಸಮಾಜದವನು. ತಂದೆ ಲೋಕಯ್ಯ ಶೆಟ್ಟಿ, ತಾಯಿ ವಸಂತಿ ಶೆಟ್ಟಿ ಇರ್ವರು ಮೃತಪಟ್ಟಿದ್ದಾರೆ. ಗುರುಪುರ, ಪೊಳಲಿ- ಚೆಳ್ಳೂರುಗುತ್ತು ಮನೆಯ ನಿವಾಸಿ ಎಂದು ಆಶ್ರಮ ಸಂಚಾಲಕರು ದಾಖಲು ಪ್ರಕ್ರಿಯೆ ನೆಡೆಸುವಾಗ ಮೃತನು ಹೇಳಿಕೊಂಡಿದ್ದಾನೆ. ಮೃತನ ಸಂಬಂಧಿಕರು, ವಾರಸುದಾರರು ಬ್ರಹ್ಮಾವರ ಆಕಾಶವಾಣಿ ಬಳಿ ಇರುವ ‘ಅಪ್ಪ-ಅಮ್ಮ’ ಅನಾಥಾಲಯದ ಸಂಚಾಲಕ ಪ್ರಶಾಂತ್ ಪೂಜಾರಿ ಕೂರಾಡಿ (ಫೋ-9164765898) ಅಥವ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ, ಸಾರ್ವಜನಿಕರು ಮೃತನ ಸಂಬಂಧಿಕರ ಪತ್ತೆ ಕಾರ್ಯದಲ್ಲಿ ಸಹಕರಿಸುವಂತೆ ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ವಿನಂತಿಸಿ ಕೊಂಡಿದ್ದಾರೆ.

