ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ಉಳ್ಳಾಲ ನೀರು ಸರಬರಾಜು ಯೋಜನೆಗೆ ಸಂಬಂಧಪಟ್ಟಂತೆ ಜಾಕ್‍ವೆಲ್ ಕಂ ಪಂಪ್ ಹೌಸ್ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಯೋಜನೆಯಡಿ ಸಜೀಪಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಶುದ್ದ ಕುಡಿಯುವ ನೀರು ಒದಗಿಸುವ ಸಲುವಾಗಿ ಇತ್ತೀಚೆಗೆ ಸಜೀಪಮುನ್ನೂರು ಗ್ರಾ.ಪಂ.ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಭೆ ನಡೆಯಿತು.

BTW_DCE23_8
ಈ ಸಂದರ್ಭ ಸಜೀಪಮುಮ್ಮೂರು ಗ್ರಾಮ ಪಂಚಾಯಿತಿನಿಂದ ಮುಡಿಪು ಪ್ರದೇಶದಲ್ಲಿರುವ ನೀರು ಶುದ್ದೀಕರಣ ಘಟಕಕ್ಕೆ ಸಗಟು ನೀರು ಒದಗಿಸುವ ಪೈಪು ಅಳವಡಿಸುವ ಸಂದರ್ಭದಲ್ಲಿಯೇ ಸಜೀಪಮುನ್ನೂರು ಗ್ರಾ.ಪಂ.ಗೆ ಮುಡಿಪುವಿನಿಂದ ಶುದ್ದ ಕುಡಿಯುವ ನೀರಿನ ಪೈಪು ಅಳವಡಿಸಬೇಕು, ನೀರಿನ ಪೈಪು ಅಳವಡಿಸಿದ ನಂತರ ಚರಂಡಿ ಮತ್ತು ರಸ್ತೆಯನ್ನು ಸರಿಪಡಿಸಿಕೊಡಬೇಕು, ಸಜೀಪಮುನ್ನೂರು ಗ್ರಾಮ ಪಂಚಾಯಿತಿಯನ್ನು ಈ ಯೋಜನೆಯಿಂದ ಹೊರಗಿಟ್ಟಲ್ಲಿ ಸಜೀಪಮುನ್ನೂರು ಗ್ರಾಮ ಪಂಚಾಯಿತಿಗೆ ಪ್ರತ್ಯೇಕ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಳೀಯ ಪ್ರದೇಶದಲ್ಲೇ ನಿರ್ಮಿಸಿ ಕೊಡಬೇಕು, ಸಜೀಪಮುನ್ನೂರು ಗ್ರಾ.ಪಂ.ನ ಆಲಾಡಿ ಕೊಪ್ಪಳ, ಉದ್ದೋಟು, ಮಲಾಯಿಬೆಟ್ಟು, ಮರ್ತಾಜೆ, ಶಾಂತಿನಗರ, ಮಾರ್ನಬೈಲು, ದಾಸರಗುಡ್ಡೆ ನಂದಾವರ ಪ್ರದೆಶದಲ್ಲಿ ನಿರಿನ ಟ್ಯಾಂಕ್ ನಿರ್ಮಿಸಿ ನೀರು ಪೂರೈಸಬೇಕು ಎನ್ನುವ ಬೇಡಿಕೆಯನ್ನು ಮಂಡಿಸಲಾಯಿತು.
ಈ ಸಂದರ್ಭಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸಜೀಪಮುನ್ನೂರು ಗ್ರಾ.ಪಂ.ಅಧ್ಯಕ್ಷ ಶರೀಫ್ ನಂದಾವರ, ಉಪಾಧ್ಯಕ್ಷೆ ನಳಿನಿ ಹಾಗೂ ಒಳಚರಂಡಿ ಮಂಡಳಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಂಜಿನಿಯರ್‍ಗಳು ಹಾಜರಿದ್ದರು.
ಈ ಬೇಡಿಕೆಯ ಮನವಿಯನ್ನು ಸೋಮವಾರ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಐಕ ಕಾರ್ಯಪಾಲಕ ಎಂಜಿನಿಯರ್ ಮೂಲಕ ಸಲ್ಲಿಸಲಾಯಿತು. ಈ ಸಂದರ್ಭ ಸಜೀಪಮುನ್ನೂರು ಗ್ರಾ.ಪಂ.ಅಧ್ಯಕ್ಷ ಶರೀಫ್ ನಂದಾವರ, ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಸದಸ್ಯ ಜನಾರ್ದನ ಮೂಲ್ಯ ಉಪಸ್ಥಿತರಿದ್ದರು.
ಬಿಟಿಡಬ್ಲ್ಯು_ಡಿ23_8
ಚಿತ್ರ: ಈ ಬೇಡಿಕೆಯ ಮನವಿಯನ್ನು ಸೋಮವಾರ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಐಕ ಕಾರ್ಯಪಾಲಕ ಎಂಜಿನಿಯರ್ ಮೂಲಕ ಸಲ್ಲಿಸಲಾಯಿತು. ಈ ಸಂದರ್ಭ ಸಜೀಪಮುನ್ನೂರು ಗ್ರಾ.ಪಂ.ಅಧ್ಯಕ್ಷ ಶರೀಫ್ ನಂದಾವರ, ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಸದಸ್ಯ ಜನಾರ್ದನ ಮೂಲ್ಯ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *