ಬಂಟ್ವಾಳ: ಸೌತ್ ಕೆನರಾ ಪೋಟೋಗ್ರಾಫರ್‍ಸ್ ಅಸೋಸಿಯೇಷನ್ ಇದರ ಬಂಟ್ವಾಳ ವಲಯದ 2019-21 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬುಧವಾರ ಸಂಜೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ವಿ.ಕುಮಾರ ಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ವಿಕೇಶ್ ಬಂಟ್ವಾಳ, ಕೋಶಾಧಿಕಾರಿಯಾಗಿ ವಿಕ್ರಂ ಫರಂಗಿಪೇಟೆ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮವನ್ನು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿ ಮಾತನಾಡಿ, ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದರು. ಒಬ್ಬರನ್ನೊಬ್ಬರು ಅನ್ಯೋನ್ಯತೆಯಿಂದ ಅರ್ಥ ಮಾಡಿಕೊಂಡಾಗ ಸಂಘಟನೆಯಲ್ಲಿ ಉತ್ತಮ ವಾತವರಣ ನಿರ್ಮಿಸಲು ಸಾಧ್ಯವಿದೆ, ತಮ್ಮ ವೃತ್ತಿಯನ್ನು ಪ್ರೀತಿಸುವುದರ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ಪೊಟೋಗ್ರಾಫರ್‍ಸ್ ಎಸೋಸಿಯೇಷನ್ ಕಾರ್ಯ ಅಭಿನಂದನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಮಾದ್ಯಮ ಛಾಯಾಗ್ರಾಹಕ ರವಿ ಪೊಸವಣಿಕೆ ಮಾತನಾಡಿ ಸಂಘಟನೆ ಸಂತೋಷವನ್ನು ಹಂಚುವ ಜಾಗ. ಛಾಯಾಗ್ರಾಹಕರೆಲ್ಲರೂ ಒಟ್ಟಾದರೆ ಸಂಘಟನೆಗಳ ಮೂಲಕ ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸಲು ಸಾಧ್ಯವಿದೆ.ಛಾಯಾಗ್ರಾಹಕರಾಗಿ ನಮ್ಮ ನಡಾವಳಿಕೆ ಉತ್ತಮವಾಗಿರಬೇಕು. ಸಾವಿರಾರು ಮಂದಿ ನಮ್ಮ ನಡವಳಿಕೆಯನ್ನು ಅವಲೋಕನ ಮಾಡುತ್ತಿರುತ್ತಾರೆ ಎಂದರು.ನೂತನ ಅಧ್ಯಕ್ಷ ವಿ. ಕುಮಾರಸ್ವಾಮಿ ಎಲ್ಲ ಸದಸ್ಯರ ಸಹಕಾರ ಕೋರಿದರು.ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಹಾಗೂ ಆರೋಗ್ಯ ನಿಧಿಯನ್ನು ಫಲಾನುಭವಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಹಸ್ತಾಂತರಿಸಿದರು. ಮುದ್ದುಕಂದ ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಛಾಯಾಗ್ರಾಹಕರನ್ನು ಅಭಿನಂದಿಸಲಾಯಿತು. ಸೌತ್‌ಕೆನರಾ ಪೊಟೋಗ್ರಾಫರ್‍ಸ್ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಬಂಟ್ವಾಳ ವಲಯದ ನಿರ್ಗಮನ ಅಧ್ಯಕ್ಷ ಹರೀಶ್ ಮಾಣಿ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡ್ಕ, ಯು.ಎಸ್.ಎ ಯ ಮಾಲತಿ ಸರ್ಪಂಗಳ, ಪೊಟೋಗ್ರಾಫರ್‍ಸ್ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವರಾವ್ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್, ಜಿಲ್ಲಾ ಕೋಶಾಧಿಕಾರಿ ಆನಂದ ಎನ್., ಬಂಟ್ವಾಳ ವಲಯದ ಗೌರವಾಧ್ಯಕ್ಷ ಸುಕುಮಾರ್ ಬಂಟ್ವಾಳ, ನಿರ್ಗಮನ ರೋಶನ್ ಕಲ್ಲಡ್ಕ, ಕೋಶಾಧಿಕಾರಿ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಲತಿ ಸರ್ಪಂಗಳ ಅದೃಷ್ಟ ಚೀಟಿ ವಿಜೇತರನ್ನು ಆಯ್ಕೆ ಮಾಡಿದರು.ಛಾಯಾಕ್ಷೇಮ ಚಾರಿಟೇಬಲ್ ಟ್ರಸ್ಟ್‌ನ ಸಂಚಾಲಕ ಆನಂದ ಎನ್. ಸ್ವಾಗತಿಸಿದರು. ಕೋಶಾಧಿಕಾರಿ ವಿಕ್ರಂ ಫರಂಗಿಪೇಟೆ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
