ಗುರುಪುರ : ಭಾರತೀಯತೆ ಮತ್ತು ಒಗ್ಗಟ್ಟು ನಮ್ಮ ಜೀವನದ ಧ್ಯೇಯ ಎಂಬ ಉದಾತ್ತ ಧ್ಯೇಯ ವಾಕ್ಯದಡಿ ಕಾರ್ಯಾಚರಿಸುತ್ತಿರುವ ಗುರುಪುರ ಗೋಳಿದಡಿಗುತ್ತಿನ `ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ'(ಪ್ರಾ.ಭಾ.ಧ.ಪು ಕೂಟ)ದ ಮಾಸಿಕ ಸಭೆ ಶಿರ್ವದ ಮಜಲಬೆಟ್ಟು ಬೀಡುವಿನಲ್ಲಿ ಡಿ. 17ರಂದು ನಡೆಯಲಿದೆ.
ಸಭೆಯಲ್ಲಿ ವಿವಿಧ ಗುತ್ತು, ಬೀಡು, ಬಾವ, ಬಾರಿಕೆ, ಪರಡಿ, ಮಾಗಂದಡಿಗಳ ಗೌರವಾನ್ವಿತ ಗಡಿಕಾರರು, ಮುಕ್ಕಾಲರು ಪಾಲ್ಗೊಳ್ಳಲಿದ್ದು, ಕೂಟದ ಮುಂದಿನ ಕೆಲವು ಮಹತ್ವದ ಕೆಲಸ-ಕಾರ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಕೂಟದ ಅಧ್ಯಕ್ಷ ಗೋಳಿದಡಿಗುತ್ತು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
