ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಬ್ರಹ್ಮಕಲಶೋತ್ಸವವು ಜ.22ರಿಂದ ಫೆಬ್ರವರಿ 3 ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದ “ಕಟೀಲ್ದ ಭ್ರಾಮರಿನ ಪೊರ್ಲುನು ತೂಕ ಬಲೇ” ತಾಯಿಯನ್ನು ಕೊಂಡಾಡುವ ಬ್ರಹ್ಮಕಲಶೋತ್ಸವದ ಹಾಡು ಬಿಡುಗಡೆಯು ಡಿ.12ರಂದು ಗುರುವಾರ ಶ್ರೀಕ್ಷೇತ್ರ ಕಟೀಲಿನಲ್ಲಿ ನಡೆಯಿತು.
ಕಟೀಲು ದೇವಳದ ಅನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಲಕ್ಷ್ಮೀನಾರಾಯಣ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಶ್ರೀ ಹರಿನಾರಾಯಣ ಆಸ್ರಣ್ಣ ಅವರು ಶುಭಕೋರಿ ಆಶೀರ್ವದಿಸಿದರು.
ಪ್ರಶಾಂತ್ ಗುರುಪುರ ಸಾಹಿತ್ಯದಲ್ಲಿ ಮೂಡಿಬಂದ ಈ ಹಾಡನ್ನು ಪುತ್ತೂರು ಜಗದೀಶ್ ಆಚಾರ್ಯ ಹಾಡಿದ್ದಾರೆ. ಭರತ್ ಗುರುಪುರ ಸಂಕಲನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗುರುರಾಜ್ ಕಟೀಲು, ಅಭಿಲಾಷ್ ಶೆಟ್ಟಿ,ಸಂದೇಶ್ ಕಟೀಲು, ರಾಜೇಶ್ ವಗ್ಗ, ಚೇತನ್ ಗುರುಪುರ , ಪ್ರಜ್ವಲ್ ಬಡಗಬೆಳ್ಳೂರು ಮೊದಲಾದವರಿದ್ದರು.
