ಮಂಗಳಜ್ಯೋತಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪುತ್ತೂರು ತಾಲೂಕು ಕ್ರೀಂಡಾಗಣದಲ್ಲಿ ನಡೆದ ದಕ ಜಿಲ್ಲಾ ಮಟ್ಟದ ವಿಶೇಷ ಸಾಮಥ್ರ್ಯದ ಮಕ್ಕಳ ಕ್ರೀಡಾಕೂಟದಲ್ಲಿ ಮಂಗಳಜ್ಯೋತಿ ಎಸ್‍ಡಿಎಂಸಿ ಸಮಗ್ರ ಶಾಲೆಯ ವಿದ್ಯಾರ್ಥಿಗಳು ಐದು ಪ್ರಥಮ, ಎರಡು ದ್ವಿತೀಯ ಹಾಗೂ ಐದು ತೃತೀಯ ಬಹುಮಾನ ಗಳಿಸಿ 17ರ ವಯೋಮಿತಿಯ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳು ಡಿ. 29ರಂದು ಮಧುಗಿರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆಂದು ಶಾಲಾ ದೈಹಿಕ ಶಿಕ್ಷಕ ಶೇಖರ ಕಡ್ತಲ ಪ್ರಕಟಣೆ ತಿಳಿಸಿದೆ.

