ಉತ್ತಮ ಕಲಾವಿದ ನೊಬ್ಬ ದೇಶ ದ ಅಸ್ತಿ , ಉತ್ತಮ ನಾಗರಿಕನಾಗಿ ಇತರರಿಗೆ ಆದರ್ಶನಾಗಬಲ್ಲ . ಕಲೆಯನ್ನು ಒಲಿಸಿಕೊಳ್ಳಲು ಕಠಿಣ ಪರಿಶ್ರಮ , ತ್ಯಾಗ , ಗಳಿಂದ ಸಾಧ್ಯ ಎಂದು ಮೊಡಂಕಾಪು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾರಾದ ಮಹಾಬಲೇಶ್ವರ ಹೆಬ್ಬಾರ್ ರವರು ಸೇವಾಂಜಲಿ ಕಲಾ ಕೇಂದ್ರದ ವಾರ್ಷಿಕ ಸಂಭ್ರಮ ಕಾರ್ಯಕ್ರಮ ದ ಮುಖ್ಯ ಅತಿಥಿ ಗಳಾಗಿ ಆಗಮಿಸಿ ಮಾತನಾಡಿದರು.
ವೇದಿಕೆಯಲ್ಲಿ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾದ ಸುದರ್ಶನ್ ಜೈನ , ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಪತ್ರಕರ್ತ ರಾದ ಜಯಾನಂದ ಪೆರಾಜೆ , ಸೇವಾಂಜಲಿ ಪ್ರತಿಷ್ಠಾನ ದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ,ಪುದು ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ್ ರೈ , ಸೇವಾಂಜಲಿ ಪ್ರತಿಷ್ಠಾನದ ಕೋಶಾಧಿಕಾರಿ ಗೋವಿಂದ ಶೆಣೈ ಮತ್ತಿತರರು ಉಪಸ್ಥಿತರಿದ್ದರು . ನೃತ್ಯ ಗುರು ಗಳಾದ ಮಂಜುಳಾ ಸುಬ್ರಮಣ್ಯರವರ ಭರತನಾಟ್ಯ ಸಭಿಕರನ್ನು ಮಂತ್ರ ಮುಗ್ದ ಗೊಳಿಸಿತು , ನೃತ್ಯ ವಿದ್ಯಾರ್ಥಿ ಗಳು ಮತ್ತು ಅವರ ಪೋಷಕರು ನೃತ್ಯ ಗುರು ಗಳಾದ ಮಂಜುಳಾ ಸುಬ್ರಮಣ್ಯರವರನ್ನು ಸನ್ಮಾನಿಸಿದರು , ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿದರು , ಸುಕೇಶ್ ಶೆಟ್ಟಿ ತೇವು ವಂದಿಸಿದರು