ನಮ್ಮ “ನಡುವಿನ” ಮೊಗಸಾಲೆ ಮೂಲತ: ಕನ್ನಡದ ನೆಲವಾದ ಆದರೆ ಈಗ ಕೇರಳಕ್ಕೆ ಸೇರಿ ಹೋಗಿರುವ ಕಾಸರಗೋಡಿನ ‘ಕೋಳ್ಯೂರು’ ಮೊಗಸಾಲೆಯವರ ಹುಟ್ಟೂರು. ಆಯುರ್ವೇದ ಓದಿದ ಅವರು ವೈದ್ಯಧಿಕಾರಿಯಾಗಿ ಬಂದು ಸೇರಿದ್ದು ಕಾರ್ಕಳ ತಾಲೂಕಿನ ಪುಟ್ಟ ಹಳ್ಳಿ ಕಾಂತಾವರಕ್ಕೆ.
1965 ನವಂಬರ್ 1, ರಾಜ್ಯೋತ್ಸವದ ದಿನದಂದು ಅವರು ಕಾಂತಾವರಕ್ಕೆ ಕಾಲಿಡುವಾಗ ಆ ಹಳ್ಳಿಯು ಎಲ್ಲಿ ಏನು ಎಂದು ಗೊತ್ತಿದ್ದದ್ದು ಸುತ್ತಮುತ್ತಲಿನ ಹಳ್ಳಿಗಳಿಗೆ ಮಾತ್ರ.! ಈಗ ಅದು ಕರ್ನಾಟಕದ ಸಾಂಸ್ಕøತಿಕ ನಕ್ಷೆಯಲ್ಲಿ ಎದ್ದು ತೋರುವ ‘ಕಾಂತಾಮರ’ವಾಗಿ ಎದ್ದು ನಿಂತಿದೆ.

IMG_20191211_155606
ಆರಂಭದಲ್ಲಿ ‘ಯುವಕಮಂಡಲ’ವನ್ನು ಕಟ್ಟಿದ (1966) ಮೊಗಸಾಲೆಯವರು ಮತ್ತೆ, ‘ಕಾಂತಾವರ ಕನ್ನಡಸಂಘ’ವನ್ನು(1976), ಮೂಡಬಿದ್ರೆಯ ‘ವರ್ಧಮಾನ ಪ್ರಶಸ್ತಿ ಪೀಠ’ವನ್ನು(1978) ಮತ್ತು ‘ಅಲ್ಲಮ ಪ್ರಭು ಪೀಠ’ವನ್ನು (2010) ಕಟ್ಟಿದ ಭಗೀರಥ. ಈ ನಾಲ್ಕು ಸಂಸ್ಥೆಗಳ ಮೂಲಕ ಕನ್ನಡವನ್ನು ಕಟ್ಟುವುದು ಹೇಗೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿರುವ ‘ಸಂಘಜಂಗಮ’.
ಸಂಘಟನೆಯಷ್ಟೇ ಅಥವಾ ಅದಕ್ಕಿಂತಲೂ ಮಿಗಿಲೆನ್ನುವಂಥ ಸೃಜನಶೀಲ ಪ್ರತಿಭೆ ಅವರದ್ದು. ಹದಿನೆಂಟು ಕಾದಂಬರಿಗಳು, ಆರು ಲೇಖನಗಳ ಸಂಗ್ರಹಗಳು, ಆರು ವೈದ್ಯಕೀಯ ಕೃತಿಗಳು, ಹನ್ನೊಂದು ಕವನ ಸಂಗ್ರಹಗಳು, ಹದಿನಾಲ್ಕು ಸಂಪಾದಿತ ಸಂಪುಟಗಳು ಅವರ ಸಾಹಿತ್ಯದ ‘ಬಯಲು ಬೆಟ್ಟ’. ಎರಡು ಮಹಾಕಾದಂಬರಿಗಳು (‘ಉಲ್ಲಂಘನೆ’ ಮತ್ತು ‘ಮುಖಾಂತರ’) ಅವರ ಸೃಜನಶೀಲ ಪ್ರತಿಭೆಯ ‘ಕೊಡಂಗಲ್ಲು’(ಕೋಡುಗಲ್ಲು). ಚೈತನ್ಯ ಪಥದ ಮೂಲ ಪುರುಷ ಶ್ರೀ ಕೃಷ್ಣ ಚೈತನ್ಯ ಮಹಾಪ್ರಭುಗಳ ಜೀವನಾಧಾರಿತ ಕಾದಂಬರಿ ‘ವಿಶ್ವಂಭರ’ ಈಚೆಗಿನ ಅವರ ‘ಮಹಾಕೃತಿ’
ಎರಡು ಬಾರಿ ಕಾದಂಬರಿಗಳಿಗೆ, ಒಂದು ಬಾರಿ ಕವನಸಂಗ್ರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಹುಮಾನಿತರಾದ ಅವರಿಗೆ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗÀಳೂ ಸಂದಿವೆ.
ಈತರಹÀದ ಇಪ್ಪತ್ತಕ್ಕೂ ಮಿಕ್ಕಿ ಖಾಸಗಿ ಪ್ರಶಸ್ತಿಗಳು ಅವರಿಗೆ ಬಂದಿವೆ. ಕರ್ನಾಟಕ ಸರಕಾರವು ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು (2004) ನೀಡಿ ಪುರಸ್ಕರಿಸಿದೆ. ಸರಕಾರವು ನೀಡುವ ‘ಬಸವ ರಾಷ್ಟ್ರೀಯ ಪ್ರಶಸ್ತಿ’, ‘ಪಂಪ ಪ್ರಶಸ್ತಿ’, ‘ಕನಕ ಪ್ರಶಸ್ತಿ’ಯೇ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳ ಆಯ್ಕೆ ಸಮಿತಿಗೆ (2016) ಅವರನ್ನು ನೇಮಿಸಿ ಗೌರವಿಸಿದೆ.
ಅವರ ಕಾದಂಬರಿಗಳು ಹಿಂದಿಗೆ, ತೆಲುಗಿಗೆ, ಮಲೆಯಾಳಕ್ಕೆ ಮತ್ತು ಇಂಗ್ಲೀಷಿಗೆ ಅನುವಾದಿಸಲ್ಪಟ್ಟಿವೆ. ಕವನಗಳು, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಫ್ರೌಢಶಾಲೆಗಳ ಪಠ್ಯಗಳಲ್ಲಿವೆ. ‘ತೊಟ್ಟಿ’À ಕಾದಂಬರಿ ಪದವಿ ತರಗತಿಗೆ ಮತ್ತು ‘ಬಯಲುಬೆಟ್ಟ’ ಆತ್ಮಕತೆಯು ಸ್ನಾತಕೋತ್ತರ ಪದವಿಗೆ ಪಠ್ಯವಾಗಿದೆ.
ಅವರ ಬದುಕು ಬರೆಹದ ಕುರಿತು ಈಗಾಗಲೇ ಪಿ.ಹೆಚ್.ಡಿ. ಮಹಾಪ್ರಬಂಧವು ಹೊರಬಂದಿದೆ. ಈಗ ಮಂಗಳೂರು, ಮೈಸೂರು ವಿವಿ ಮತ್ತು ಗುಲ್ಬರ್ಗದ (ಮಹಿಳಾ)ವಿ.ವಿ.ಯಲ್ಲಿ ಅವರ ಕೃತಿಗಳ ಕುರಿತು ಮೂರು ಮಹಾಪ್ರಬಂಧಗಳು ಸಿದ್ಧವಾಗುತ್ತಿವೆ. ‘ಲೋಕವಾದಿ’, ‘ಮೊಗಸಾಲೆಯ ಮುಖಾಂತರ’, ‘ಕಾಂತಾವರದ ಕಾಂತಾರವ’ ಎನ್ನುವ ಕೃತಿಗಳಲ್ಲಿ ಅವರ ಬದುಕು ಬರೆಹಗಳನ್ನು ಖ್ಯಾತ ಲೇಖಕರು ತೆರೆದಿಟ್ಟಿದ್ದಾರೆ.

By Suddi9

Leave a Reply

Your email address will not be published. Required fields are marked *