ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಎಂಬಲ್ಲಿ ಗುಡ್ಡ ಜರಿದು ಮೂವರು ಕಟ್ಟಡ ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಇಲ್ಲಿನ ಶಿಖರದ ಮೇಲಿನ ಬೆಟ್ಟದ ಬದಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಪಂಚಾಂಗ ನಿರ್ಮಿಸುವ ಕೆಲಸ ಮಾಡುತ್ತಿದ್ದ ಕಾರ್ಮಿಕರು ಗುಂಡಿಯೊಳಗೆ ಕೆಲಸ ಮಾಡುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮೇಲಿನ ಬೆಟ್ಟದಿಂದ ಮಣ್ಣು ಕುಸಿದು ಪಂಚಾಂಗದ ಮೇಲೆ ಬಿತ್ತು. ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ ಬಾಳಪ್ಪ ನಾಯ್ಕ ಆಲಂಗಾರ್, ರಮೇಶ್ ಕಾಪುಮಜಲ್ ಮತ್ತು ಪ್ರಕಾಶ್ ಮುರುವ, ಮಾಣಿಲ ಎಂಬವರು ಮಣ್ಣಿನೊಳಗೆ ಹೂತು ಪ್ರಾಣ ಕಳೆದುಕೊಂಡಿದ್ದಾರೆ.7-2

7-1ಇನ್ನೊಬ್ಬರಾದ ಪ್ರಭಾಕರ ಎಂಬವರನ್ನು ಮೇಲೆತ್ತಿ ರಕ್ಷಿಸಲಾಗಿದೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾ ಸಿಬ್ಬಂದಿ,  ಪೊಲೀಸರು, ಬಂಟ್ವಾಳ ತಹಸೀಲ್ದಾರ್ ಎಸ್ ಆರ್ ರಶ್ಮಿ ಭೇಟಿ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *