ಬಂಟ್ವಾಳ, : ಉಡುಪಿ ಹಾಗೂ ದ.ಕ.ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಽಗಳ ಕ್ರೀಡೋತ್ಸವ-ಸಾಂಸ್ಕೃತಿಕ ಸ್ಪರ್ಧೆಗಳ ಹೊಳಪು-೨೦೧೯ ಸಮಾರಂಭವು ಕೋಟತಟ್ಟು ಗ್ರಾ.ಪಂ.ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಡಿ. ೨೮ರಂದು ಕೋಟದಲ್ಲಿ ನಡೆಯಲಿದ್ದು, ಅದರ ನಿಯೋಗವು ಶನಿವಾರ ಬಂಟ್ವಾಳ ತಾ.ಪಂ.ಗೆ ಭೇಟಿ ನೀಡಿ ಸಮಾರಂಭಕ್ಕೆ ಆಹ್ವಾನಿಸಿತು.
IMG-20191207-WA0055

ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಆಮಂತ್ರಣ ಸ್ವೀಕರಿಸಿ ಭಾಗವಹಿಸುವ ಭರವಸೆ ನೀಡಿದರು. ಸಚಿವರ ಆಪ್ತಸಹಾಯಕ ರಂಜಿತ್‌ಕುಮಾರ್ ಅವರು ಮಾಹಿತಿ ನೀಡಿ, ಹೊಳಪು ಸಮಾರಂಭದ ಯಶಸ್ವಿಗೆ ಬಂಟ್ವಾಳದ ಜನಪ್ರತಿನಿಽಗಳು ಹಾಗೂ ಸ್ತಳೀಯಾಡಳಿತದ ಸಿಬಂದಿಯ ಸಹಕಾರಬೇಕಿದ್ದು, ಕಳೆದ ೪ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾ.ಪಂ.ಗಳು, ನಗರ ಸ್ಥಳೀಯಾಡಳಿತಕ್ಕೆ ಭೇಟಿ ನೀಡಿ ಸಮಾರಂಭಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದೇವೆ ಎಂದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಸದಸ್ಯರಾದ ಪ್ರಭಾಕರ ಪ್ರಭು, ಯಶವಂತ ಪೊಳಲಿ, ಬಿ.ವನಜಾಕ್ಷಿ ಉಪಸ್ಥಿತರಿದ್ದರು. ಕಲ್ಯಾಣಪುರ ಗ್ರಾ.ಪಂ.ಸದಸ್ಯ ವಿಷುಕುಮಾರ್, ಸಚಿವರ ಆಪ್ತ ಮಹೇಶ್ ಹಟ್ಟಿಕುದ್ರು, ಪ್ರಣಾಮ್‌ರಾಜ್ ಅಜ್ಜಿಬೆಟ್ಟು ನಿಯೋಗದಲ್ಲಿದ್ದರು. ತಾ.ಪಂ.ಕಾರ್ಯನಿರ್ವಹಣಾಽಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *