ಕೋಲಾರ : ಅಜಿತ್‍ಕುಮಾರ್‍ರವರು ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ಕಾರ್ಯನಿರ್ವಹಿಸದ್ದು, ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ದೊರೆಯಬೇಕೆಂಬ ಮಹದಾಸೆಯಿಂದ ತಮ್ಮ ಎರಡು ಇಂಜಿನಿಯರಿಂಗ್ ಕೋರ್ಸ್‍ಗಳಲ್ಲಿ ಗೋಡ್ಡ್ ಮೆಂಡಲ್ ಪಡೆದಿದ್ದರೂ ಸಹ ತಮ್ಮ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಾ ಸಂಘದ ಪ್ರಚಾರಕರಾಗಿ ನಂತರ ಎಲ್ಲರಿಗೂ ಆರೋಗ್ಯ ಎನ್ನುವ ನಿಟ್ಟಿನಲ್ಲಿ ಪತಂಜಲಿ ಯೋಗ ಸಂಸ್ಥೆಯನ್ನು ಹುಟ್ಟುಹಾಕಿ ರಾಷ್ಟ್ರದಾದ್ಯಂತ ಅನುಷ್ಠಾನಗೊಳಿಸಿರುವುದು ಶ್ಲಾಘನೀಯ. ಇವರು ಕೋಲಾರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನವರು ಎಂಬುದು ನಮ್ಮೆಲ್ಲರ ಹೆಮ್ಮೆ ಎಂದು ಶಂಕರ್ ಕಣ್ಣಿನ ಆಸ್ಪತ್ರೆಯ ಡಾ|| ಶಂಕರ್ ನಾಯಕ್ ತಿಳಿಸಿದರು.
ಅಜಿತ್ ಸೇವಾ ಪ್ರತಿಷ್ಠಾನ, ಕೋಲಾರ ವತಿಯಿಂದ ಡಿಸೆಂಬರ್ 3ರಂದು ಸೇವಾ ದಿನದ ಪ್ರಯುಕ್ತ ಕೋಲಾರ ನಗರದ ಪಾಲಸಂದ್ರ ಬಡಾವಣೆಯಲ್ಲಿರುವ ಶ್ರೀ ನವನಳಂದ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು
ಮಕ್ಕಳ ತಜ್ಞ ಡಾ|| ಬಾಲಸುಂದರ್ ರವರು ಮಾತನಾಡಿ ಇಂದಿನ ಮಕ್ಕಳು ಜಂಕ್ ಪುಡ್, ಪಾಸ್ಟ್ ಪುಡ್‍ಗಳಿಗೆ ಮಾರು ಹೋಗಿದ್ದಾರೆ. ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ ಕಾಣುತ್ತಿದ್ದು, ಪಾಲಕರು ಮಕ್ಕಳಿಗೆ ಸರಿಯಾದ ಪೋಷಕಾಂಶವುಳ್ಳ ಆಹಾರದ ಅಭ್ಯಾಸ ಮಾಡಿಸುವುದು ಅತ್ಯವಾಗಿದೆ ಎಂದು ತಿಳಿಸಿದರು.
ಕಣ್ಣಿನ ತಜ್ಞ ಡಾ|| ಶಂಕರ್ ನಾಯಕ್, ಮಕ್ಕಳ ತಜ್ಞ ಡಾ||ಬಾಲಸುಂದರ್, ಚರ್ಮರೋಗ ತಜ್ಞ ಡಾ|| ಉಮೇಶ್‍ರವರುಗಳು ಶಾಲಾ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರಿಗೆ ಆರೋಗ್ಯ ತಪಾಸಣೆ ನಡೆಸಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರು ಹಾಗೂ ಅಜಿತ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಶ್ರೀನಿವಾಸ್, ಕಾರ್ಯದರ್ಶಿ ಎಸ್.ನಂದೀಶ್ ಕುಮಾರ್, ಮುಕುಂದ್, ಹರಿಕೃಷ್ಣ, ರಾಘವೇಂದ್ರ ಹಿರಿಯ ಸಮಾಜಸೇವಕರಾದ ಸೂ.ರಾಮಚಂದ್ರಪ್ಪ, ಶಿಕ್ಷಣ ತಜ್ಞ ಬೀಮರಾವ್ ಉಪಸ್ಥಿತರಿದ್ದರು.
