ಕೋಲಾರ : ಕೋಲಾರ ಜಿಲ್ಲಾ ಪಂಚಾಯಿತಿಗೆ ವೇಮಗಲ್ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಸಮಾಜ ಸೇವಕರು ಆದ ಸಿ.ಎಸ್. ವೆಂಕಟೇಶ್‍ರವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಕಲ್ವಮಂಜಲಿ ಸಿ. ಶಿವಣ್ಣ ಸ್ಥಾಪಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕೀಯರ ಕ್ಷೇಮಾಭಿವೃದ್ಧಿ ಸಮಿತಿಯಿಂದ ಹೂಗುಚ್ಚ ನೀಡಿ, ಸಿಹಿ ತಿನಿಸುವುದರ ಮೂಲಕ ಶುಭಕೋರಲಾಯಿತು.Kalvamnajli shivanna

ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ನಿರ್ಮಲಾ ಬಾಯಿ, ರಾಜ್ಯ ಸಂಚಾಲಕಿ ನಾಗವೇಣಮ್ಮ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ವೆಂಕಟರತ್ನಮ್ಮ, ಮಾಲೂರಿನ ಎಂ.ವಿಜಯಕುಮಾರಿ, ಕ್ಯಾಲನೂರು ರಾಮಕೃಷ್ಣಪ್ಪ, ಜಿಲ್ಲಾಧ್ಯಕ್ಷೆ ಎಚ್.ಎನ್.ಸೀತಾಲಕ್ಷ್ಮಿ, ಕೋಲಾರ ತಾಲ್ಲೂಕು ಅಧ್ಯಕ್ಷೆ ಮುನಿಯಮ್ಮ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷೆ ಶಶಿಕಲಾ, ತಾಲ್ಲೂಕು ಉಪಾಧ್ಯಕ್ಷರಾದ ಕಾಂತಮ್ಮ, ಸುಗುಣ ಮುಂತಾದವರು ಉಪಸ್ಥಿತರಿದ್ದು ಶುಭಕೋರಿದರು.

By suddi9

Leave a Reply

Your email address will not be published. Required fields are marked *