ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್,ರೋಟರಿಕ್ಲಬ್ ಬಂಟ್ವಾಳ ಟೌನ್,ರೋಟರಿ ಕ್ಲಬ್ ಮಡಂತ್ಯಾರ್ ಇವರ ಜಂಟಿ ಆಶ್ರಯದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ತಿಳುವಳಿಕೆ ನೀಡುವ ಶಿಬಿರವು ದ.8 ರಂದು ಲೊರೆಟ್ಟೋ ಚಚ್೯ನ ವಠಾರದ ಮಿನಿ ಸಭಾಂಗಣದಲ್ಲಿ ನಡೆಯಲಿದೆ. ಈ ಬಗ್ಗೆ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಮತ್ತು ರೋಟರಿಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಪದ್ಮರಾಜ್ ಬಲ್ಲಾಳ್ ಹಾಗೂ ಜಯರಾಜ್ ಬಂಗೇರ ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.IMG-20191204-WA0048

ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರ,ಡಾ.ಬಿ.ಆರ್ ಮತ್ತು ಸಿ.ಆರ್.ಶೆಟ್ಟಿ ಪೌಂಡೇಶನ್,ಬೆಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿಯು ಈ ಶಿಬಿರದ ಸಹಯೋಗವನ್ನು ನೀಡುತ್ತಿದ್ದು,ಮಂಗಳೂರು ಎ.ಜೆ.ಆಸ್ಪತ್ರೆಯ ಕನ್ಸಲ್ಟೆಂಟ್ ಮೆಡಿಕಲ್ ಅಂಕೊಲಾಜಿಸ್ಟ್ ಡಾ.ರಚನ್ ಶೆಟ್ಟಿ ಕೆ.ಎಸ್.ಅವರು ಮಾಹಿತಿ ನೀಡಲಿದ್ದಾರೆ ಎಂದು ಅವರು ವಿವರಿಸಿದರು.ಈ ಶಿಬಿರದಲ್ಲಿ ಪುರುಷರು ಮತ್ತು  ಸ್ತ್ರೀಯರನ್ನು ಪ್ರತ್ಯೇಪ್ರತ್ಯೇಕವಾಗಿ ತಪಾಸಣೆ ನಡೆಸಲಾಗುತ್ತಿದೆ.ವೀಡಿಯೋ ಪ್ರದರ್ಶನದ ಮೂಲಕ ಕ್ಯಾನ್ಸರ್ ಕುರಿತ ಮಾಹಿತಿಯನ್ನು ನೀಡಲಾಗುತ್ತದೆ.ತಪಾಸಣೆಯ ವೇಳೆ ಕ್ಯಾನ್ಸರ್ ರೋಗ ಪತ್ತೆಯಾದಲ್ಲಿ ಅಂತವರಿಗೆ ಮುಂದಿನ ಚಿಕಿತ್ಸೆ ನೀಡುವ ಕುರಿತು ವೈದ್ಯರು ಕ್ರಮಕೈಗೊಳ್ಳಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ರೋ.ಅವಿಲ್ ಮನೇಜಸ್,ರೋ.ಎಚ್ ರಾಮಚಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *