ಬಂಟ್ವಾಳ : ಇರ್ವತ್ತೂರು ಗ್ರಾಮದ ಮಣ್ಣೂರು ಮತ್ತು ಪಂಜೋಡಿ ರಸ್ತೆಯ ಕಾಂಕ್ರೀಟಿಕರಣಕ್ಕೆ 15 ಲಕ್ಷ ಅನುದಾನವನ್ನು ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಇದರ ಗುದ್ದಲಿ ಪೂಜೆಯನ್ನು ಸಂಗಬೆಟ್ಟು ಕ್ಷೇತ್ರದ ಜಿ.ಪಂ ಸದಸ್ಯ ತುಂಗಪ್ಪ ಬಂಗೇರ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ರಮೇಶ್ ಕುಡುಮೇರು, ಸುಜಾತ, ಪ್ರಕಾಶ್,ಶಂಕರ ಶೆಟ್ಟಿ ಬೆದ್ರ್ಮಾರು, ದಯಾನಂದ ಕುಲಾಲ್, ಸುಂದರ್ ನಾಯ್ಕ ಜಾರಿಗೆದಡಿ, ರವಿಶಂಕರ್ ಹೊಳ್ಳ, ದಯಾನಂದ ನಾಯ್ಕ ಎರ್ಮೆನಾಡು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.
