ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ. ವಿಷ್ಣುನಗರ ಇಲ್ಲಿ ಉದ್ಘಾಟನೆಗೊಂಡಿದ್ದು, ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟನೆಯನ್ನು ಇಡ್ಕಿದು ಗ್ರಾಮಪಂಚಾಯತ್‍ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ ಉದ್ಘಾಟಿಸಿ “ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳ ಜೀವನದ ಅನುಭವಗಳನ್ನು ಅರಿಯುವುದಕ್ಕೆ ಸಹಕಾರಿಯಾಗಿದೆ” ಎಂದರು.

IMG-20191125-WA0002ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ|| ಮಂಜುನಾಥ್ ಸಿ ಕೆ ಇವರು “ಪುಸ್ತಕಗಳಿಂದ ಲಭಿಸುವ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನವು ವಿದ್ಯಾರ್ಥಿಗಳಿಗೆ ಅತ್ಯಂತ ಮುಖ್ಯ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಈ ರೀತಿಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಇಂದು ನಾವು ಎದುರಿಸುವ ಹಲವಾರು ಪ್ರಾಕೃತಿಕ ಸಮಸ್ಯೆಗಳಿಗೆ ಇಂತಹ ಶಿಬಿರಗಳ ಮುಖಾಂತರ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. ರಾಷ್ಟ್ರೀಯತೆಯ ಭಾವನೆಗಳನ್ನು ಯುವ ಮನಸ್ಸಿನಲ್ಲಿ ಮೂಡಿಸುವುದರ ಜೊತೆಗೆ ರಾಷ್ಟ್ರಕ್ಕಾಗಿ ಮಿಡಿಯುವ ಹಾಗೂ ತುಡಿಯುವ ಮನಸ್ಸನ್ನು ನಿರ್ಮಾಣ ಮಾಡುತ್ತದೆ. ಅಂತೆಯೇ ಡಾ| ಅಬ್ದುಲ್ ಕಲಾಂ, ರಾಧಕೃಷ್ಣನ್, ಉಪೇಂದ್ರ ಮೊದಲಾದ ಹಲವಾರು ವ್ಯಕ್ತಿಗಳು ಇಂತಹ ಶಿಬಿರಗಳಿಂದ ಪ್ರಭಾವಿತರಾಗಿದ್ದಾರೆ. ಎಂದು ಆಶಯ ಭಾಷಣದಲ್ಲಿ ನುಡಿದರು.

ಮುಖ್ಯ ಅಥಿತಿಗಳಾದ ವಿಟ್ಲ ಸೀಮೆಯ ಗುರಿಕಾರ ಶ್ರೀ ಕೆ ಟಿ ವೆಂಕಟೇಶ್ವರ ಭಟ್ ನೂಜಿ ಇವರು ಮಾತನಾಡಿ “ ಇಂದು ಇಲ್ಲಿರುವ ಎಲ್ಲಾ ಶಿಬಿರಾರ್ಥಿಗಳು ನಮ್ಮ ಅಥಿತಿಗಳಾಗಿ, ನಮ್ಮ ನಡುವೆ ಕೊಡು-ಕೊಳ್ಳುವ ಸಂಬಂಧ ಗಟ್ಟಿಯಾಗುತ್ತದೆ” ಎಂದು ಶಿಬಿರಕ್ಕೆ ಶುಭ ಹಾರೈಸಿದರು.
ಶ್ರಮದಾನದ ಉದ್ಘಾಟನೆಯನ್ನು ವಿಟ್ಲ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷ ಪುರುಷೋತ್ತಮ ಭಟ್ ಇವರು ನೆರವೇರಿಸಿದರು. ವೇದಿಕೆಯಲ್ಲಿ ವಿಟ್ಲ ಸೇವಾ ಸಹಕಾರಿ ಸಂಘ ಇದರ ಉಪಾಧ್ಯಕ್ಷ ಶ್ರೀ ದಯಾನಂದ ಶೆಟ್ಟಿ ಉಜಿರೆಮಾರು, ವಕೀಲರಾದ ಶ್ರೀ ಗೊವಿಂದರಾಜ್ ಕುಳ, ವಿಟ್ಲ ಮುಡ್ನೂರು ಗ್ರಾಮ ಸಮೃದ್ಧಿ ಸಮಿತಿ ಇದರ ಕಾರ್ಯದರ್ಶಿ ಯತೀಶ್ ಹಡೀಲು, ಅಳಿಕೆ ಪಂಚಾಯತ್‍ನ ಪಿಡಿಒ ಜಿನ್ನಪ್ಪ ಗಾಳಿಗುಡ್ಡೆ, ಕಾಲೇಜಿನ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪೂರ್ಣಶ್ರೀ, ಕಾಲೇಜಿನ ಪ್ರಾಚಾರ್ಯರಾದ ಕ್ರಷ್ಣಪ್ರಸಾದ ಕಾಯರ್‍ಕಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 56 ಶಿಬಿರಾರ್ಥಿಗಳು ಪಾಲ್ಗೊಂಡಿರುತ್ತಾರೆ. ಕಾರ್ಯಕ್ರಮವನ್ನು ಯೋಜನಾಧಿಕಾರಿ ಹರೀಶ್ ಸ್ವಾಗತಿಸಿ, ಉಪನ್ಯಾಸಕರಾದ ಸಚಿನ್ ಜೈನ್ ಹಳೆಯೂರು ವಂದಿಸಿ, ಉಪನ್ಯಾಸಕಿಯಾದ ಲತಾಶ್ರೀ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *