ಸ್ಪರ್ದಾತ್ಮಕಯುಗದಲ್ಲಿಜೀವನೋಪಾಯಕ್ಕಾಗಿ ಕೆಲಸಕ್ಕೆ ಅಲೆದಾಡುವವರುಒಂದುಕಡೆಯಾದರೆ, ಸಿಕ್ಕ ಕೆಲಸದಲ್ಲಿ ನೆಮ್ಮದಿ ಕಾಣದೆಒದ್ದಾಡುವವರು ಹಲವರು. ಈಗಿನ ಆಧುನಿಕಯುಗದಲ್ಲಿಅನೇಕರುಯಾವುದೋ ಅನಿವಾರ್ಯತೆಗೆ ಸಿಲುಕಿ ತಮಗಿಷ್ಟವಿಲ್ಲದ ಕೆಲಸದಲ್ಲೇ ಮುಂದುವರಿಯುತ್ತಿರುತ್ತಾರೆ. ಸುಖ ಜೀವನಕ್ಕೆ ನಾವು ಮಾಡುವ ಕೆಲಸ ಯಾವುದೇಅದರೂ ಸಿಕ್ಕ ಕೆಲಸದಲ್ಲೆತೃಪ್ತಿಯನ್ನುಕಂಡುಕೊಂಡಿರುವವರುಲಲಿತಮ್ಮ.ಶ್ರೀ ಕ್ಷೇತ್ರ  ಧರ್ಮಸ್ಥಳದಲ್ಲಿ ನೆಡೆಯುವ ಲಕ್ಷದೀಪೋತ್ಸವಉತ್ಸವಕ್ಕೆತಮ್ಮತಮ್ಮಜೇವನೋಪಾಯಕ್ಕಾಗಿದೂರದ ಊರುಗಳಿಂದ ಬಂದವ್ಯಾಪಾರಸ್ಥರಲ್ಲಿ ಲಲಿತಮ್ಮನವರೂಒಬ್ಬರು.ಸುಮಾರು ೫೦ವರ್ಷಗಳ ಹಿಂದೆತಮ್ಮಜೀವನೋಪಾಯಕ್ಕಾಗಿಉಜಿರೆಯ ಧರ್ಮಸ್ಥಳಕ್ಕೆ ಬಂದ ಲಲಿತಮ್ಮ ಮತ್ತುಅವರಕುಟುಂಬ ಅಲ್ಲಿಯೇಒಂದು ಪುಟ್ಟಅಂಗಡಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇವರು ನೆಲ್ಲಿಕಾಯಿ, ಬುಗರಿ, ಮಾವಿನಕಾಯಿ, ಪೇರಳೆ ಮತ್ತುಚಾಕ್‌ಲೇಟುಗಳನ್ನು ಮಾರಾಟ ಮಾಡುತ್ತಾರೆ.೨೫ ವರ್ಷಗಳ ಹಿಂದೆತಮ್ಮಗಂಡನಜೊತೆಗೆ ಮೇಸ್ತ್ರಿ ಕೆಲಸ ಮಾಡುತ್ತಿದ್ದಇವರು ಪತಿಯ ಮರಣದ ನಂತರ ಈ ವೃತ್ತಿಯನ್ನುಕೈಗೆತ್ತಿಕೊಂಡಿದ್ದಾರೆ. ೬೦ ವರ್ಷದ ಲಲಿತಮ್ಮ ಧರ್ಮಸ್ಥಳದ ಎಲ್ಲಾಜಾತ್ರೆ, ಉತ್ಸವಗಳಲ್ಲಿ ಭಾಗವಹಿಸುತ್ತಾರೆ.IMG-20191123-WA0031

ವಾರಕ್ಕೆಎರಡು ಬಾರಿ ಮಂಗಳೂರು ಮಾರುಕಟ್ಟೆಯಿಂದ ಸುಮಾರು ಮೂರು ಸಾವಿರರೂಪಾಯಿದರದ ಉತ್ಪನ್ನಗಳನ್ನು ತಂದು ಮಾರಾಟ ಮಾಡುವುದರ ಮೂಲಕ ಜೀವನಕ್ಕಾಗುವಷ್ಟು ಸಂಪಾದನೆ ಮಾಡುತ್ತೇನೆ. ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಸಾಗಿಸುವ ವೇಳೆ ಕೆಲವೊಮ್ಮೆ ತೊಂದರೆಗಳು ಎದುರಾಗುತ್ತವೆ, ಆದರೆ ತೊಂದರೆಗಳಿಗೆ ತಲೆಕೆಡಿಸಿಕೊಂಡು ಕೂತರೆ ನಮ್ಮಜೀವನ ನಡೆಯದು, ಏನೇ ತೊಂದರೆಗಳು ಎದುರಾದರೂಅದನ್ನುಎದುರಿಸುವಛಲ ನಮ್ಮಲ್ಲಿರಬೇಕುಎಂದುತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಲಲಿತಮ್ಮ.IMG-20191123-WA0028

ಖರ್ಚುವಚ್ಚವನ್ನೆಲ್ಲ ಬದಿಗಿಟ್ಟು ಲೆಕ್ಕ ಹಾಕುವುದಾದರೆ ದಿನಕ್ಕೆ ಎಂಟುನೂರು ರೂಪಾಯಿಗಳ ಸಂಪಾದನೆಜೊತೆಗೆಇನ್ನೂರು ರೂಪಾಯಿಗಳಷ್ಟು ಲಾಭವಿದೆ. ನನ್ನ ಈ ವೃತ್ತಿಗೆಕುಟುಂಬದವರೆಲ್ಲರ ಪ್ರೋತ್ಸಾಹವಿದೆ, ಮತ್ತುಇದುನನ್ನಜೀವನಕ್ಕೆ ನೆಮ್ಮದಿ, ಸಂತೊಷವನ್ನುತಂದುಕೊಟ್ಟಿದೆ. ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗಡೆಯವರ ಬೆಂಬಲ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ನಮ್ಮೆಲ್ಲಾ ಕೆಲಸಗಳಲ್ಲಿ ಬೆನ್ನೆಲುಬಾಗಿ ನಿಂತಿದೆ ಎಂದುತಮ್ಮಖುಷಿಯನ್ನುನಮ್ಮೊಂದಿಗೆ ಹಂಚಿಕೊಂಡರು.

ವರದಿ: ಪಲ್ಲವಿ ಕೋಂಬ್ರಾಜೆ
ಚಿತ್ರಗಳು: ಅಭಿರಾಮ ಶರ್ಮ

By suddi9

Leave a Reply

Your email address will not be published. Required fields are marked *