ಕೈಕಂಬ:ಮಂಗಳೂರು ತಾಲೂಕು ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ(ರಿ) ಮೂಡುಶೆಡ್ಡೆ, ವಾಮಂಜೂರು, ಮಂಗಳೂರು ಇದರ ವಾರ್ಷಿಕ ಮಹೋತ್ಸವ ಮತ್ತು ಸನ್ಮಾನ ಸಮಾರಂಭ ಉನ್ನತಿ ನಲಿಕೆ ಬಾಂಧವರ ಬಾಂದವ್ಯ ಮತ್ತು ಏಳಿಗೆ ಕಾರ್ಯಕ್ರಮ ನ.24 ಅದಿತ್ಯವಾರ 9 ಗಂಟೆಗೆ ಶ್ರೀ ರಾಮ ಭಜನಾ ಮಂದಿರ ವಾಮಂಜೂರುನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಗುರುಪುರ ಮುಂಡತ್ತಾಯ ದೈವಸ್ಥಾನ ಆಡಳಿತ ಮೊಕ್ತೇಸರರು ಪ್ರಮೋದ್ ಕುಮಾರ್ ರೈ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಶಾಸಕ ಡಾ.ವೈ ಭರತ್ ಶೆಟ್ಟಿ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ತಿರುವೈಲು ಮಾಜಿ ಕಾರ್ಪೋರೇಟರ್ ಜಯಪ್ರಕಾಶ್, ತಿರುವೈಲು ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್, ಜಿಲ್ಲಾ ಅಧ್ಯಕ್ಷರು ಹಿಂದೂ ಯುವ ಸೇನೆ ಮೂಡುಶೆಡ್ಡೆ ಎಸ್. ವೀರಪ್ಪ, ಮೂಡುಶೆಡ್ಡೆ ಗ್ರಾ.ಪಂ.ಮಾಜಿ ಅಧ್ಯಕ್ಷ ಉಮೇಶ್ ಜೆ., ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ ಮೂಡುಶೆಡ್ಡೆ ಸ್ಥಾಪಕ ಅಧ್ಯಕ್ಷ ಶೀನ ಸಖಾರ, ದೈವನರ್ತಕರು ಮತ್ತು ಸನ್ಮಾನಿತರು ಸಂಜೀವ ಕಂದಾವರ ಬೈಲು ಉಪಸ್ಥಿತರಿರುವರು.
ಸಾಂಸ್ಕ್ರತಿಕ ಕಾರ್ಯಕ್ರಮ ನಲಿಕೆ ಬಾಂಧವರ ಮಕ್ಕಳಿಂದ “ನೃತ್ಯ ವೈಭವ” ಯಕ್ಷಗಾನ ಪೂರ್ವರಂಗ ಗಾನ ವೈಭವ, ಕೊಳಲು ನಾದ ವೈಭವ, ಯಕ್ಷಗಾನ ನಾಟ್ಯವೈಭವ ಶ್ರೀ ಸೋಮನಾಥೇಶ್ವರ ಯಕ್ಷನಿಧಿ(ರಿ) ಪೊರ್ಕೋಡಿ ಇದರ ಸದಸ್ಯರಿಂದ ಯಕ್ಷಗುರುಗಳಾದ ರವಿ ಅಲೆವೂರಾಯ ವರ್ಕಾಡಿ,”ಬಸವ ರತ್ನ, ರಾಷ್ಟ್ರಪ್ರಶಸ್ತಿ ಪುರಸ್ಕ್ರತರು ಇವರ ನಿರ್ದೇಶನದಲ್ಲಿ ಶ್ರೀರಾಮ ದರ್ಶನಂ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *