ಬಂಟ್ವಾಳ: ಭಾರತೀಯ ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾ ,  ಆರ್.ಬಿ.ಒ.2 ಮಂಗಳೂರು ಇದರ ಬಂಟ್ವಾಳ ಶಾಖೆಯ ಆಶ್ರಯದಲ್ಲಿ ಗ್ರಾಹಕರ ಟೌನ್‌ ಹಾಲ್ ಮೀಟಿಂಗ್  ಕಾರ್ಯಕ್ರಮ  ಶುಕ್ರವಾರ ಬಿ.ಸಿ.ರೋಡಿನಲ್ಲಿ ನಡೆಯಿತು.
IMG-20191122-WA0051
ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ಯಾಂಕಿನ ಎ.ಜಿ.ಎಮ್.ದಿನೇಶ್ ಆರೂರು ಬ್ಯಾಂಕಿನಿಂದ ಗ್ರಾಹಕರಿಗೆ ಸಿಗುವ ಸವಲತ್ತುಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಗ್ರಾಹಕರು ಬ್ಯಾಂಕಿಂಗ್ ವ್ಯವಹಾರದ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆ ಗಳ ಬಗ್ಗೆಯು  ಮಾಹಿತಿ ಪಡೆದುಕೊಂಡರಲ್ಲದೆ ಹೊಸ ಹೊಸ  ತಂತ್ರಜ್ಞಾನದ ಮೂಲಕ ಬ್ಯಾಂಕ್ ಸವಲತ್ತುಗಳನ್ನು ನೀಡುತ್ತಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯಬೇಕೆಂದರು.ಮುಂದಿನ ದಿನಗಳಲ್ಲಿ ಉತ್ತಮ ಸೇವೆಗಳನ್ನು ಒದಗಿಸಲು ಬ್ಯಾಂಕ್ ನಲ್ಲಿ ಅಗಬೇಕಾದ ಬದಲಾವಣೆಯ ಕುರಿತಾಗಿ ಗ್ರಾಹಕರಿಂದ ಸಲಹೆಯನ್ನು ಪಡೆದರು.
ವೇದಿಕೆಯಲ್ಲಿ ಪಿಂಚಣಿ ದಾರರ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ, ಬಂಟ್ವಾಳ ಎಸ್.ಬಿ.ಐ.ಬ್ಯಾಂಕ್  ಮ್ಯಾನೇಜರ್ ರವೀಂದ್ರ ಕುಮಾರ್, ಲೋನ್ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಡಿ.  ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *