ಬಂಟ್ವಾಳ: ಬಂಟ್ವಾಳ ತಾ.ಪಂ.ನಲ್ಲಿ ೨೦೧೮-೧೯ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ೩,೨೬,೭೬,೬೯೪ ರೂ. ಅನುದಾನ ಲಭ್ಯವಾಗಿದ್ದು ಅದರಲ್ಲಿ ೨,೨೦,೭೬,೫೩೨ ರೂ.ಗಳು ಬಳಕೆಯಾಗಿ ೧,೦೬,೦೦,೧೬೧ ರೂ.ಉಳಿದಿರುತ್ತದೆ ಎಂದು ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದ್ದಾರೆ.2011ks1 ph

ಅವರು ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ದ.ಕ.ಜಿ.ಪಂ.ಮುಖ್ಯ ಯೋಜನಾಧಿಕಾರಿ ಸಂಧ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಜಮಾಬಂದಿ ಸಭೆಯಲ್ಲಿ ವಿವರ ನೀಡಿದರು. ತಾ.ಪಂ.ನಲ್ಲಿ ಹಿಂದಿನ ಸಾಲಿನಲ್ಲಿ ೧,೦೯,೯೦,೯೮೯ ರೂ.ಉಳಿಕೆಯಾಗಿದ್ದು, ಬಳಿಕ ಮುಂದಿನ ಸಾಲಿನಲ್ಲಿ ೨,೧೬,೮೫,೭೦೫ ರೂ.ಬಿಡುಗೆಯಾಗಿತ್ತು. ಒಟ್ಟು ೩,೨೬,೭೬,೬೯೪ ರೂ.ಲಭ್ಯವಾಗಿ ಅದರಲ್ಲಿ ೨,೨೦,೭೬,೫೩೨ ರೂ.ಗಳು ಖರ್ಚಾಗಿರುತ್ತದೆ.
೨೦೧೮-೧೯ನೇ ಸಾಲಿನಲ್ಲಿ ತಾ.ಪಂ.ಹಾಗೂ ವಿವಿಧ ಇಲಾಖೆಗಳ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನಕ್ಕೆ ೧೧,೮೮೭.೦೧ ಲಕ್ಷ ರೂ.ಬಿಡುಗಡೆಯಾಗಿದ್ದು, ಅದಲ್ಲಿ ೧೧,೧೩೬.೪೦ ಲಕ್ಷ ರೂ.ಖರ್ಚಾಗಿ, ೭೫೦ .೬೧ ಲಕ್ಷ ರೂ.ಉಳಿಕೆಯಾಗಿದೆ. ಇದರಲ್ಲಿ ಶಿಕ್ಷಣ ಇಲಾಖೆಗೆ ೭೮೧೬.೬೧ ಲಕ್ಷ ರೂ.ಬಿಡುಗಡೆಯಾಗಿದ್ದು, ೭೭೯೫.೮೧ ಲಕ್ಷ ರೂ.ಖರ್ಚಾಗಿ ೨೦.೮೦ ಲಕ್ಷ ರೂ.ಉಳಿಕೆಯಾಗಿದೆ. ಆರೋಗ್ಯ ಇಲಾಖೆಗೆ ೪೬.೧೬ ಬಿಡುಗಡೆಯಾಗಿ ೩೧.೫೯ ಲಕ್ಷ ರೂ.ಖರ್ಚಾಗಿ ೧೪.೫೭ ಲಕ್ಷ ರೂ.ಉಳಿಕೆಯಾಗಿದೆ ಎಂದು ತಾ.ಪಂ.ಇಓ ವಿವರಿಸಿದರು.
ತಾ.ಪಂ.ಕಟ್ಟಡದ ಕುರಿತಂತೆ ೫೦ ಲಕ್ಷ ರೂ.ಗಳ ಅಭಿವೃದ್ಧಿಗೆ ೨೦ ಲಕ್ಷ ರೂ.ಬಂದಿದ್ದು, ೩೦ ಲಕ್ಷ ರೂ.ಗಳ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. ಜತೆಗೆ ನಿರ್ವಹಣೆಗೆ ನೀಡಲಾಗುವ ಅನುದಾನ ಕಡಿಮೆಯಾಗುತ್ತಿದೆ ಎಂದಾಗ ಹೆಚ್ಚಿನ ಬೇಡಿಕೆ ಸಲ್ಲಿಸುವಂತೆ ಮುಖ್ಯ ಯೋಜನಾಧಿಕಾರಿ   ಸೂಚಿಸಿದರು.
ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸಹಾಯಕ ಅಧಿಕಾರಿ ಪ್ರೀತಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *