-ಬಂಟ್ವಾಳ:   ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರು ಸ್ವಚ್ಚತೆಗೆ ಹೆಚ್ಚು ಗಮನ ನೀಡಬೇಕು, ಗಾಂಧಿಯವರ ಕನಸು ನನಸಾಗಲು ಪ್ರಧಾನಿ ಮೋದಿಯವರ ಸ್ವಚ್ಚ ಭಾರತ ಪರಿಕಲ್ಪನೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತ್ಯನಾಂದ ಸ್ವಾಮೀಜಿ ಹೇಳಿದರು.
1   ಬಂಟ್ವಾಳ ತಾಲೂಕು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ , ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಿ.ಸಿ‌ರೋಡು ವಲಯದ ವತಿಯಿಂದ ಭಾನುವಾರ  ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ  ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ  ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ನಮ್ಮ ಮನಸ್ಥಿತಿ ಬದಲಾಗದೆ ಸ್ವಚ್ಚ ಭಾರತವಾಗಲು ಸಾಧ್ಯವಿಲ್ಲ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ  ಮಾಡಿ ಪರಿಸರದ ರಕ್ಷಣೆ ಮುಂದಾಗಬೇಕೆಂದ ಅವರು
2
 ತಾವು  ಮಾಡುವ   ಸಮಾಜಿಮುಖಿ ಕೆಲಸಗಳು ಜೀವನಕ್ಕೆ ಅರ್ಥ ನೀಡುತ್ತದೆ ಎಂದರು. ಧಾರ್ಮಿಕ ಉಪನ್ಯಾಸಗೈದ ಉಡುಪಿಯ ಖ್ಯಾತ ನ್ಯಾಯವಾದಿ ಸಹನಾ ಕುಂದರ್ ಅವರು, ತುಳುನಾಡಿನಲ್ಲಿ ಆಧ್ಯಾತ್ಮಿಕವಾದ ಬದುಕು ಕಟ್ಟುವ ಕಾರ್ಯವಾಗಬೇಕಾಗಿದೆ.ಇಂದಿನ ಆಧುನಿಕತೆಯ ಭರಾಟೆ, ಸಂಕುಚಿತ ಮನೋಭಾವದಿಂದ ಕುಟುಂಬ ವ್ಯವಸ್ಥೆ ಗಳೇ ಮಾಯವಾಗಿವೆ ಎಂದು ವಿಷಾಧಿಸಿದರು.
3
ಸಾಧನೆಯ ಮೂಲಕ ಖುಷಿಯಲ್ಲಿ ಬದುಕಿಬಾಳಬೇಕಾದ , ಹೆತ್ತವರನ್ನು ಸಾಕಿ ಸಲಹಬೇಕಾದ ಯುವಕ ,ಯುವತಿಯರು  ದುಶ್ಚಟಗಳಿಗೆ ಬಲಿಯಾಗದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅತಿಥಿಯಾಗಿದ್ದ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಮಾತನಾಡಿ ಸಂಸ್ಕಾರದ ಜೀವನಕ್ಕೆ ಇಂತಹ ಧರ್ಮ ಕಾರ್ಯಗಳು ನಡೆಯುವ ಅಗತ್ಯವಿದೆ ಎಂದು  ಹೇಳಿದರು.
ಬಂಟ್ವಾಳ ಭೂಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ ಶಕ್ತಿಯ ಜೊತೆಯಲ್ಲಿ  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರ್ಥಿಕವಾಗಿ ಬದುಕು ನೀಡಿದೆ    ಎಂದು  ಹೇಳಿದರು. ‌
ವೇದಿಕೆಯಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ  ಅಧ್ಯಕ್ಷ ಮಾದವ ವಳವೂರು, ಜನಜಾಗೃತಿ ವೇದಿಕೆಯ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಬಂಟ್ವಾಳ ವಲಯದ ಅಧ್ಯಕ್ಷ ವಸಂತ ಮೂಲ್ಯ, ವಲಯ ಮೇಲ್ವಿಚಾರಕ ಕೇಶವ ಮತ್ತಿತರರು ಉಪಸ್ಥಿತರಿದ್ದರು.ಅಚಾರಿಪಲ್ಕೆ ಒಕ್ಕೂಟದ ಅಧ್ಯಕ್ಷ  ರಾಜೇಶ್ ಸ್ವಾಗತಿಸಿದರು. ‌ಬಿ.ಸಿ.ರೋಡು ವಲಯದ ಅಧ್ಯಕ್ಷ ಶೇಖರ ಸಾಮಾನಿ ವಂದಿಸಿದರು.
ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು. ‌ಇದಕ್ಕು ಮೊದಲು  ರಾಧಾಕೃಷ್ಣ ಭಟ್ ಅವರ ಅಪೌರೋಹಿತ್ಯ ದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

 

By Suddi9

Leave a Reply

Your email address will not be published. Required fields are marked *