ಫರಂಗಿಪೇಟೆ :ದ.ಕ ಜಿಲ್ಲೆಯಲ್ಲೇ ವಿಶೇಷವಾಗಿ ಸೇವಾಂಜಲಿ ಪ್ರತಿಷ್ಠಾನ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಯಾದಾಗ ರಕ್ತ ದಾನ ಶಿಬಿರಗಳನ್ನು ಆಯೋಜಿಸಿ ಅವಶ್ಯ ರಕ್ತ ವನ್ನು ಪೂರೈಸುವ ಮೂಲಕ ಶ್ಲ್ಯಾಘನೀಯ ಕೆಲಸ ಮಾಡುತ್ತಿದೆ . ೧೦೫ ರಕ್ತದಾನ ಶಿಬಿರಗಳಿಂದ ಹತ್ತು ಸಹಸ್ರಕ್ಕೂ ಮಿಕ್ಕಿ ಜೀವ ಉಳಿಸಿದ ಸೇವಾಂಜಲಿ ಯ ಹೆಸರು ಚಿರಸ್ಥಾಯಿಯಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ ಎಂ ಲಕ್ಷ್ಮಿ ಪ್ರಸಾದ್ ರವರು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಯ ಆಶ್ರಯ ದಲ್ಲಿ ಕೆ ಎಂ ಸಿ ಮಂಗಳೂರು ಇವರ ಸಹಯೋಗ ದೊಂದಿಗೆ 105ನೇ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು , ಆನಂತರ ಮಾತನಾಡಿದ ಆರ್ಥಿಕ ಮತ್ತು ಸಮುದಾಯ ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್ ಪ್ರಕಾಶ್ ಕಾರಂತ ರವರು ರಕ್ತದಾನ ಕೇವಲ ಒಂದು ಜೀವವನ್ನು ಉಳಿಸುವುದಿಲ್ಲ, ಬದಲಾಗಿ ಅದು ಈ ಜಗತ್ತಿನಲ್ಲಿ ಮಾನವೀಯತೆಯ ಇರುವನ್ನು ನೆನಪಿಸುತ್ತದೆ ಎಂದರು.
ಈ ಸಂದರ್ಭ ದಲ್ಲಿ ವೇದಿಕೆಯಲ್ಲಿ ಸೇವಾಂಜಲಿ ಟ್ರಸ್ಟ್ ನ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ , ನಿವೃತ್ತ ಅಬಕಾರಿ ಅಧಿಕಾರಿ ಎಂ ಆರ್ ನಾಯರ್ , ಪ್ರೆಸಿಡೆನ್ಸಿ ಸ್ಕೂಲ್ ನೀರುಮಾರ್ಗ ದ ಟ್ರಸ್ಟಿ ಝಪ್ರುಲ್ಲಾ ಒಡೆಯರ್ , ಕೆ ಎಂ ಸಿ ಯ ವೈದ್ಯೆ ಉಮಾ , ಗಣ್ಯರುಗಳಾದ ಪ್ರಕಾಶ್ಚಂದ್ರ ರೈ ದೇವಸ್ಯ , ತೇವು ತಾರಾನಾಥ ಕೊಟ್ಟಾರಿ , ಸೋಮಪ್ಪ ಕೋಟ್ಯಾನ್ , ಪದ್ಮನಾಭ್ ಶೆಟ್ಟಿ ಪುಂಚಮೆ , ಶಾಬಿರ್ ಅರ್ಕುಳ , ಜಯ ಸಾಲ್ಯಾನ್ ಡೆಮುಂದೆ , ಪ್ರಕಾಶ್ ಕಿದೆಬೆಟ್ಟು , ಮಹಮ್ಮದ್ ಬಾವ , ಭಾಸ್ಕರ ಚೌಟ ಕುಂಭ್ಡೇಲು , ಅರ್ಜುನ್ ಪೂಂಜಾ , ಪದ್ಮನಾಭ ಕಿದೆಬೆಟ್ಟು , ಉಮಾ ಚಂದ್ರಶೇಖರ , ನಾಗಪ್ಪ ಶೆಟ್ಟಿ , ಬಾಲಕೃಷ್ಣ ರೈ ದೇವಸ್ಯ ಮತ್ತಿತರರು ಉಪಸ್ಥಿ ತರಿದ್ದರು ,ಕಂಪ ಸದಾನಂದ ಆಳ್ವ ರವರು ಸ್ವಾಗತಿಸಿದರು , ಕೊಡ್ಮಾಣ್ ದೇವದಾಸ್ ಶೆಟ್ಟಿ ವಂದಿಸಿದರು.

