ಮಂಗಳೂರು: ಕೊಂಡಾಟದ ಬಾಲೆ-2019 ಯುವವಾಹಿನಿ ಕೊಲ್ಯ ಘಟಕ ಮಕ್ಕಳ ದಿನಾಚರಣೆಯ ಅಂಗವಾಗಿ ಬ್ರಹ್ಮ ಶ್ರೀ ನಾರಾಯಣ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೀರ್ಥ ಪೂಜಾರಿ ಪೊಳಲಿ ಇವರನ್ನು ಯುವವಾಹಿನಿ ಘಟಕದ ಸಂದರ್ಭದಲ್ಲಿ ಗುರುವಾರ ಸನ್ಮಾನಿಸಲಾಯಿತು.
ಈಸಂದರ್ಭದಲ್ಲಿ ಕುಂಪಲ ಕೇಸರಿ ಮಾತ್ರ್ ಮಂಡಳಿ ಗೌರವಧ್ಯಕ್ಷೆ ಜಯಲಕ್ಷ್ಮೀ ಮೋನಪ್ಪ ಪೂಜಾರಿ,ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು , ಗೋಕರ್ಣನಾಥ ಕೊ.ಆಪರೇಟಿವ್ ಬ್ಯಾಂಕ್ ನಿವೃತ ಪ್ರಬಂಧಕ ಕೃಷ್ಣಪ್ಪ ಪೂಜಾರಿ ,ಮಂಗಳೂರು ಘಟಕ ಯುವವಾಹಿನಿ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರ ಗುರಿಕಾರ ಅಶೋಕ್ ಕುಮಾರ್ , ಕೊಲ್ಯ ಸೋಮೇಶ್ವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೇಣು ಗೋಪಾಲ್ ಕೊಲ್ಯ, ಕೊಲ್ಯ ಸೋಮೇಶ್ವರ ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷೆ ಚಂದ್ರಾವತಿ ಕೊಲ್ಯ , ಯುವ ವಾಹಿನಿ ಅಧ್ಯಕ್ಷ ಕೊಲ್ಯ ಘಟಕ ಆನಂದ ಮಲಯಾಳ ಕೋಡಿ ಮತ್ತಿತರರು ಇದ್ದರು

